ಕ್ಷಯರೋಗಿಗಳಿಗೆ ಆಧಾರ್ ಕಡ್ಡಾಯ
Update: 2017-06-21 21:35 IST
ಹೊಸದಿಲ್ಲಿ, ಜೂ. 21: ಕೇಂದ್ರ ಸರಕಾರದ ಯೋಜನೆ ಅಡಿ ಸೌಲಭ್ಯ ಪಡೆಯಲು ಬಯಸುವ ಕ್ಷಯ ರೋಗಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕು ಎಂದು ಕೇಂದ್ರ ಸರಕಾರದ ಅಧಿಸೂಚನೆ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಅಧಿಸೂಚನೆಯಲ್ಲಿ ಆಧಾರ ಕಾರ್ಡ್ ಹೊಂದಿರದೇ ಇರುವವರು ಆಗಸ್ಟ್ 31ರೊಳಗೆ ಆಧಾರ್ ಕಾರ್ಡ್‌ಗೆ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದೆ.
ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಡಿ ಸೌಲಭ್ಯ ಸ್ವೀಕರಿಸಲು ಅರ್ಹರಾದ ವ್ಯಕ್ತಿಗಳು ಆಧಾರ್ ಕಾರ್ಡ್ ನಂಬರ್‌ನ ದಾಖಲೆ ಒದಗಿಸಬೇಕು ಅಥವಾ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ.