ನಿಷೇಧಿತ ನೋಟು ಆರ್‌ಬಿಐಯಲ್ಲಿ ಜಮೆ ಮಾಡಲು ಜುಲೈ 20 ಅಂತಿಮ ದಿನಾಂಕ

Update: 2017-06-21 16:39 GMT

ಹೊಸದಿಲ್ಲಿ, ಜೂ. 21: ಬ್ಯಾಂಕ್ ಹಾಗೂ ಅಂಚೆ ಕಚೇರಿಗಳು ನಿಷೇಧಿತ 500 ಹಾಗೂ 1,000 ರೂಪಾಯಿ ನೋಟುಗಳನ್ನು ಜುಲೈ 20ರ ಒಳಗೆ ರಿಸರ್ವ್ ಬ್ಯಾಂಕ್‌ನಲ್ಲಿ ಜಮೆ ಮಾಡಬೇಕು ಎಂದು ಕೇಂದ್ರ ಸರಕಾರ ಹೇಳಿದೆ.

ನಿಷೇಧಿತ ನೋಟುಗಳನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಜಮೆ ಮಾಡಲು ಬ್ಯಾಂಕ್, ಅಂಚೆ ಕಚೇರಿ ಹಾಗೂ ಕೋ-ಆಪರೇಟಿವ್ ಬ್ಯಾಂಕ್‌ಗಳಿಗೆ ಸರಕಾರ ನೀಡುತ್ತಿರುವ ಎರಡನೇ ಅವಕಾಶ ಇದಾಗಿದೆ. ಈ ಹಿಂದೆ ನಗದು ಅಪವೌಲ್ಯೀಕರಣದ 50 ದಿನಗಳ ಬಳಿಕ ಅತ್ಯಧಿಕ ವೌಲ್ಯದ ನೋಟುಗಳನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಜಮೆ ಮಾಡಲು ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಕೇಂದ್ರ ಸರಕಾರ ನವೆಂಬರ್ 8ರಂದು ನಗದು ಅಪವೌಲ್ಯೀಕರಣ ಮಾಡಿದ ಬಳಿಕ ಡಿಸೆಂಬರ್ 30ರ ವರೆಗೆ ನಿಷೇಧಿತ ನೋಟುಗಳನ್ನು ಸ್ವೀಕರಿಸುವಂತೆ ವಾಣಿಜ್ಯ ಬ್ಯಾಂಕ್, ಅಂಚೆ ಕಚೇರಿಗಳಿಗೆ ಕೇಂದ್ರ ಸರಕಾರ ಅವಕಾಶ ನೀಡಿತ್ತು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ನಿಷೇಧಿತ ನೋಟುಗಳನ್ನು ಸ್ವೀಕರಿಸಲು ಕೇವಲ ನವೆಂಬರ್ 14ರ ವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು.

ಹಣಕಾಸು ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದ್ದು, ಮುಂದಿನ ಒಂದು ತಿಂಗಳ ಒಳಗೆ ಹಳೆಯ, ನಿಷೇದಿತ ನೋಟುಗಳನ್ನು ರಿಸರ್ವ್ ಬ್ಯಾಂಕ್‌ನೊಂದಿಗೆ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News