×
Ad

ಎಸ್‌ಡಿಪಿಐ ಅಶ್ರಫ್ ಕೊಲೆ ಖಂಡನೀಯ: ಡಿವೈಎಫ್‌ಐ

Update: 2017-06-21 22:09 IST

ಬಂಟ್ವಾಳ, ಜೂ. 21: ಕಲ್ಲಡ್ಕ ಗಲಭೆಯ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿಯೇ ಬೆಂಜನಪದವು ಬಳಿ ನಡೆದಿರುವ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕೊಲೆ ಆತಂಕಕಾರಿ. ಈ ಬರ್ಬರ ಕೊಲೆಯನ್ನು ಡಿವೈಎಫ್‌ಐ ತೀವ್ರವಾಗಿ ಖಂಡಿಸುತ್ತದೆ. ಕೊಲೆಯ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೋಮುರಾಜಕಾರಣ, ಪ್ರತೀಕಾರದ ಸರಣಿ ಕೊಲೆಗಳನ್ನು ತಡೆಗಟ್ಟುವಲ್ಲಿ ಸರಕಾರದ ವೈಫಲ್ಯ ಜಿಲ್ಲೆಯ ಜನರು ಆತಂಕದ ನೆರಳಿನಲ್ಲಿಯೇ ಬದುಕುವಂತೆ ಮಾಡಿದೆ. ಕಳೆದ ಒಂದು ದಶಕದಲ್ಲಿ ಗುರುಪುರ, ಪೊಳಲಿ, ಮಲ್ಲೂರು, ಬೆಂಜನಪದವು ಭಾಗದಲ್ಲಿ ಮತೀಯ ಹಿನ್ನೆಲೆಯ ಪ್ರತೀಕಾರದ ಕನಿಷ್ಠ ಏಳೆಂಟು ಕೊಲೆಗಳು ನಡೆದಿವೆ. ಆದರೂ ಪೊಲೀಸ್ ಇಲಾಖೆಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂತಹ ಕೊಲೆಗಳಿಗೆ ಪೂರ್ಣವಿರಾಮ ಹಾಕಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿದೆ. ಜನತೆ ಸದಾ ಭಯದಿಂದ ಜೀವನ ಸಾಗಿಸುವಂತಾಗಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು. ಅಲ್ಲದೆ, ಶಾಂತಿ ಕಾಪಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜನತೆಯಲ್ಲಿ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News