ಯೋಗದಿಂದ ಏಕಾಗ್ರತೆ ಸಾಧ್ಯ- ಡಾ. ಸರಾಫ್
ಭಟ್ಕಳ, ಜೂ. 21: ಯೋಗದಿಂದ ವಿದ್ಯಾರ್ಥಿಗಳಲ್ಲಿ ಎಕಾಗ್ರತೆಯು ಹೆಚ್ಚುವುದರಿಂದ ಶೈಕ್ಷಣಿಕ ಪ್ರಗತಿ ಸಾಧಿಸಲು ಅನುಕೂಲವಾಗುವುದು ಎಂದು ಸಮಾಜ ಸೇವಕ ಶಿರಾಲಿಯ ಡಾ. ಆರ್. ವಿ. ಸರಾಫ್ ಹೇಳಿದರು.
ಅವರು ಜನತಾ ವಿದ್ಯಾಲಯ ಪ್ರೌಢಶಾಲೆ ಶಿರಾಲಿಯಲ್ಲಿನ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಯೋಗದಿಂದ ಬುದ್ಧಿ ಶಕ್ತಿಯೂ ವೃದ್ಧಿಯಾಗುವುದರೊಂದಿಗೆ, ಆರೋಗ್ಯ ವೃದ್ಧಿಗೂ ಕೂಡಾ ಸಹಕಾರಿಯಾಗಿದೆ. ಯೋಗಿಗಳು ಸದಾ ಆಸೆ ಬರುಕುತನವನ್ನು ಪ್ರದರ್ಶಿಸದೇ ಯಮ-ನಿಯಮಗಳನ್ನು ಪಾಲಿಸಿಕೊಂಡು ಬರುವುದರಿಂದ ಇಲ್ಲಿನ ಮಾನಸಿಕ ನೆಮ್ಮದಿಯೂ ಕೂಡಾ ದೊರೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ.ಜೆ. ಕಾಮತ್ ವಹಿಸಿದ್ದರು. ಮುಖ್ಯ ಅತಿಥಿ ಶ್ರೀನಿವಾಸ ಮಹಾಲೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಗಗುರು ಗೋವಿಂದ ದೇವಡಿಗ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಎಂ.ಪಿ.ಭಂಡಾರಿ, ಯೋಗ ಪಟು ದುರ್ಗಾದಾಸ ಮಾತನಾಡಿದರು. ವೇದಿಕೆಯಲ್ಲಿ ವಿಷ್ಣು ಶ್ಯಾನುಭಾಗ್, ಜನತಾ ವಿದ್ಯಾಲಯ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಎ.ಬಿ.ರಾಮರಥ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗಗುರು ಗೋವಿಂದ ದೇವಡಿಗ ಹಾಗೂ ಸುಕನ್ಯಾ ಭಟ್ಟ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಎಂ. ಎ. ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಕಾರ್ಯಕ್ರಮ ನಿರ್ವಹಿಸಿದರು.