ಸಾವಿರಾರು ಜನರ ಸಮ್ಮುಖದಲ್ಲಿ ಅಶ್ರಫ್ ಕಲಾಯಿ ಅಂತ್ಯಸಂಸ್ಕಾರ

Update: 2017-06-21 17:46 GMT

ಬಂಟ್ವಾಳ, ಜೂ. 21: ಇಂದು ಬೆಳಗ್ಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮುಹಮ್ಮದ್ ಅಶ್ರಫ್ ಕಲಾಯಿ ಅವರ ಮೃತದೇಹದ ಅಂತಿಮ ಸಂಸ್ಕಾರವು ಕಲಾಯಿ ಜುಮಾ ಮಸೀದಿಯ ವಠಾರದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು. 

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಡ್ಯಾರ್ ಕಣ್ಣೂರಿನ ಜುಮಾ ಮಸೀದಿಯಲ್ಲಿ ಮೃತದೇಹದ ಸ್ನಾನ ನೆರವೇರಿ ಸಲಾಯಿತು. ಆ ಬಳಿಕ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬಳಿಕ ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಕಲಾಯಿ ಮಸೀದಿ ಬಳಿಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಈ ಸಂದರ್ಭ ನೆರೆದಿದ್ದ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ತದನಂತರ ಮೃತದೇಹವನ್ನು ಮಸೀದಿಯ ವಠಾರದಲ್ಲಿ ದಫನ ಮಾಡಲಾಯಿತು.

ಈ ಸಂದರ್ಭ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತಂಬೆ, ರಾಜ್ಯಧ್ಯಕ್ಷ ಅಬ್ದುಲ್ ಹನ್ನಾನ್, ಪ್ರಮುಖರಾದ ಯಾಸರ್ ಹಸನ್, ನವಾಝ್ ಉಳ್ಳಾಲ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಇಲ್ಯಾಸ್ ಮುಹಮ್ಮದ್ ತುಂಬೆ ಅಶ್ರಫ್ ಕೊಲೆ ಖಂಡನೀಯವಾಗಿದ್ದು, ಜಿಲ್ಲಾಡಳಿತ ಮತ್ತು ಆಡಳಿತದ ವೈಫ್ಯಲ್ಯದಿಂದ ಈ ಕೊಲೆ ನಡೆದಿದ್ದು, ಇದರ ವಿರುದ್ಧ  ಕಾನೂನು ಹೋರಾಟ ನಡೆಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News