ಬಸ್ಸಿಗೆ ಕಲ್ಲೆಸೆತ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
Update: 2017-06-22 12:57 IST
ಮಂಗಳೂರು, ಜೂ. 22: ಖಾಸಗಿ ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಬಗ್ಗೆ ಖಂಡನೆ ವ್ಯಕ್ತ ಪಡಿಸಿರುವ ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜೂ.21ರಂದು ಸಂಜೆ ಸುರತ್ಕಲ್‌ನಲ್ಲಿ ಆಸೆಲ್ ಟ್ರಾವೆಲ್ಸ್‌ಗೆ ಸೇರಿದ ಬಸ್ ಹಾಗೂ ರಾತ್ರಿ ಇನೋಳಿಯಲ್ಲಿ ನಿಲ್ಲಿಸಿದ್ದ ಅಕ್ಷಯ ಟ್ರಾವೆಲ್ಸ್, ಚಿತ್ರ ರಾಜ್ ಹಾಗೂ ಪದ್ಮಶ್ರೀ ಬಸ್ ಗಳಿಗೆ ಮಧ್ಯರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಗೊಳಿಸಿದ್ದಾರೆ. ಇದರಿಂದ ಬಸ್ ಮಾಲಕರಿಗೆ ನಷ್ಟ ಉಂಟಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧಕ್ಷ ಅಝೀಝ್ ಪರ್ತಿಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.