ಮಗನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಯ ಬೇಡಿಕೆಯೇನು ಗೊತ್ತೇ ? : ವೀಡಿಯೋ ವೈರಲ್

Update: 2017-06-22 08:00 GMT

ಒಂಟಾರಿಯೋ, ಜೂ. 22: ಕೆನಡಾದ ಒಂಟಾರಿಯೋದ ಮಿಸ್ಸಿಸ್ಸಾಗ ಎಂಬಲ್ಲಿನ ಆಸ್ಪತ್ರೆಯೊಂದಕ್ಕೆ ತನ್ನ ಮಗನ ಚಿಕಿತ್ಸೆಗೆಂದು ಬಂದ ಮಹಿಳೆಯೊಬ್ಬಳು ತನ್ನ ಮಗನ ವೈದ್ಯಕೀಯ ತಪಾಸಣೆಯನ್ನು ಕಂದು ಬಣ್ಣದ ಹಲ್ಲುಗಳಿಲ್ಲದ, ಇಂಗ್ಲಿಷ್ ಮಾತನಾಡುವ ಬಿಳಿ ವೈದ್ಯರೊಬ್ಬರು ನಡೆಸಬೇಕೆಂದು ಹೇಳಿ ಅಲ್ಲಿದ್ದ ಎಲ್ಲರನ್ನೂ ದಂಗು ಬಡಿಸಿದ್ದಾಳೆ. ಆಕೆ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ನಡೆಸಿದ ಸಂಭಾಷಣೆಯೂ ವೈರಲ್ ಆಗಿದೆ

‘‘ಇಡೀ ಆಸ್ಪತ್ರೆಯಲ್ಲಿ ಬಿಳಿ ವೈದ್ಯರಿಲ್ಲವೇನು ? ಎದೆ ನೋವಿರುವ ನನ್ನ ಮಗನನ್ನು ಇಲ್ಲಿ 4 ಗಂಟೆಯ ತನಕ ಕಾಯಿಸಬೇಕೇನು ? ಎಂದು ಆಕೆ ಅಲ್ಲಿನ ಸಿಬ್ಬಂದಿ ಆಕೆಯ ಬೇಡಿಕೆಗೆ ತಕ್ಕಂತೆ ವೈದ್ಯರನ್ನು ಕೂಡಲೇ ಅಲ್ಲಿಗೆ ತರಿಸಲು ಸಾಧ್ಯವಿಲ್ಲವೆಂದಾಗ ಪ್ರತಿಕ್ರಿಯಿಸಿದಳು.

‘‘ಈ ದೇಶದಲ್ಲಿ ಬಿಳಿಯಳಾಗಿರುವ ನಾನು ನನಗೇ ಗುಂಡಿಕ್ಕಿಕೊಳ್ಳಬೇಕು. ನನ್ನ ಮಗು ಭಾಗಶಃ ಬಿಳಿಯಾಗಿಲ್ಲ, ಆದುದರಿಂದ ಕನಿಷ್ಠ ಇಂಗ್ಲಿಷ್ ಮಾತನಾಡುವ ವೈದ್ಯರು ನಮಗೆ ಸಿಗಬಹುದೇ ?’’ ಎಂದೂ ಆಕೆ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದಳು.

ಕಳೆದ ರವಿವಾರ ಅಪರಾಹ್ನ ನಡೆದ ಈ ಘಟನೆಯನ್ನು ಹಿತೇಶ್ ಭಾರದ್ವಾಜ್ ಎಂಬ ಭಾರತೀಯ ವ್ಯಕ್ತಿಯೊಬ್ಬ ಸ್ಟುಡಿಯೋದಲ್ಲಿ ಸೆರೆ ಹಿಡಿದಿದ್ದು ಆತ ಕೂಡ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ. ಈ ಘಟನೆ ತನ್ನಲ್ಲಿ ಕಳವಳವನ್ನುಂಟು ಮಾಡಿತು, ಅದಕ್ಕಾಗಿ ಅದರ ಚಿತ್ರೀಕರಣ ಮಾಡಿದೆ ಎಂದು ಆತ ಹೇಳಿಕೊಂಡಿದ್ದು ಈ ಘಟನೆ ಇಡೀ ಕೆನಡಾದ ಜನತೆಯಲ್ಲಿ ಆಕ್ರೋಶ ಮೂಡಿಸಿದೆ.

ಆಸ್ಪತ್ರೆಯ ಸಿಬ್ಬಂದಿ ಆ ಮಹಿಳೆಯೊಂದಿಗೆ ಸೌಜನ್ಯದಿಂದ ಮಾತನಾಡಿದರೂ ಅಲ್ಲಿದ್ದ ಹಲವರಿಗೆ ಆಕೆಯ ಗಲಾಟೆಯನ್ನು ಸಹಿಸುವುದು ಅಸಾಧ್ಯವಾಗಿತ್ತು. ವೀಡಿಯೋ ತೆಗೆಯುತ್ತಿದ್ದ ಭಾರದ್ವಾಜ್ ಮತ್ತಿತರನ್ನುದ್ದೇಶಿಸಿ ‘‘ನೀವು ಕಂದು ಬಣ್ಣದವರು, ನಾನು ಬಿಳಿಯಳು ಎಂದು ನನ್ನ ಮೇಲೆ ಹರಿಹಾಯುತ್ತಿದ್ದೀರಿ,’’ ಎಂದು ಆಕೆ ದೂಷಿಸಿದ್ದಳು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News