ಆಸ್ಟ್ರೇಲಿಯನ್ ಓಪನ್: ಶ್ರೀಕಾಂತ್, ಪ್ರಣೀತ್ ಕ್ವಾರ್ಟರ್ ಫೈನಲ್‌ಗೆ

Update: 2017-06-22 07:43 GMT

ಹೊಸದಿಲ್ಲಿ, ಜೂ.22: ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯಲ್ಲಿ ಎರಡನೆ ಸುತ್ತಿನ ಪಂದ್ಯವನ್ನು ಗೆದ್ದುಕೊಂಡಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಬಿ.ಸಾಯಿ ಪ್ರಣೀತ್ ಹಾಗೂ ಕೆ.ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ವಿಶ್ವದ 14ನೆ ರ್ಯಾಂಕಿನ ಆಟಗಾರ ಪ್ರಣೀತ್ ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಚೀನಾದ ಹ್ಯೂಯಾಂಗ್ ಯುಕ್ಸಿಯಂಗ್ ವಿರುದ್ಧ 21-15, 18-1, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಶ್ರೀಕಾಂತ್ ಮಲೇಷ್ಯಾದ ನಂ.1 ಆಟಗಾರ ಸನ್ ವಾನ್-ಹೊ ವಿರುದ್ಧ 15-21, 21-13, 21-13ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಜಪಾನ್‌ನ ಕೊಹರು ಯೊನೆಮೊಟೊ ಹಾಗೂ ಶಿಹೊ ತನಕಾ ವಿರುದ್ಧ 21-18, 18-21, 13-21 ಗೇಮ್‌ಗಳ ಅಂತರದಿಂದ ಶರಣಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News