×
Ad

ಎಸ್ಸೆಸ್ಸೆಫ್ ಮೇನಾಲ ಯುನಿಟ್: ಇಫ್ತಾರ್ ಕೂಟ, ಈದ್ ಕಿಟ್ ವಿತರಣೆ

Update: 2017-06-22 13:21 IST

ಪುತ್ತೂರು, ಜೂ. 22: ಎಸ್ಸೆಸ್ಸೆಫ್  ಮೇನಾಲ ಯುನಿಟ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ  ಬೃಹತ್ ಸೌಹಾರ್ದ ಇಫ್ತಾರ್ ಸಂಗಮ ಮತ್ತು ಅನಾಥ, ಬಡ ನಿರ್ಗತಿಕರಿಗೆ ಈದ್ ಕಿಟ್ ವಿತರಣೆ  ಮೇನಾಲ‌ ಎಸ್ಸೆಸ್ಸೆಫ್  ಕಚೇರಿಯಲ್ಲಿ ಹಂಸ ಮುಸ್ಲಿಯಾರ್ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಶಾಖಾ ಅಧ್ಯಕ್ಷ ಅಬ್ದುಲ್ ಖಾದರ್ ಝುಹ್ರಿ ನೇತ್ರತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುರ್ರಹ್ಮಾನ್ ಹಾಜಿ ಮೇನಾಲ ವಹಿಸಿದರು. ಇಸ್ಹಾಕ್ ಮಿಸ್ಬಾಹಿ ಸ್ವಾಗತಿಸಿ, ಝಕರಿಯ ಸಖಾಫಿ ಪಿ.ಎಸ್. ಉದ್ಘಾಟಿಸಿದರು. ತ್ವಾಹ ಸಹದಿ, ಅಬ್ದುಲ್ಲಾ ಹನೀಫಿ, ಅಬ್ಬು ಎ.ಎಚ್, ಮುಹಮ್ಮದ್ ಕುಂಞ ಶುಭ ಹಾರೈಸಿದರು.

ವೇದಿಕೆಯಲ್ಲಿ ಗಲ್ಫ್ ಪ್ರತಿನಿಧಿಗಳಾದ ಶರೀಫ್ ಜಿ.ಕೆ., ಸವಾದ್ ಯು.ಎಂ., ಅಬ್ದುಲ್ ಖಾದರ್ ಮದಕ, ಎಂ.ಎ.ಎಚ್ ಮೇನಾಲ, ಖಾದರ್ ದರ್ಕಾಸ್, ನಿಝಾಂ, ಸಿದ್ದಿಕ್  ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಧಿತರಿದ್ದರು. ಕಾರ್ಯದಶಿರ್ ಶಾಫಿ ಕೊಪ್ಪಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News