ನೂಡಲ್ಸ್ ಜೊತೆಗೆ ಹಾವು ಫ್ರೀ !

Update: 2017-06-22 07:52 GMT

ಬೀಜಿಂಗ್ ,ಜೂ.22: ಚೀನಾದ ಗಾಂಗ್‌ಕ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಕಳೆದ ಶುಕ್ರವಾರ ಊಟ ಮಾಡಲು ಕುಳಿತಾಗ ತನ್ನ ನೂಡಲ್ಸ್ ನಲ್ಲಿ ಹಾವೊಂದು ಇರುವುದನ್ನು ಕಂಡು ದಂಗಾಗಿ ಹೋಗಿದ್ದಾಳೆ. ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿರುವ ಆಹಾರ ಮಳಿಗೆಯಿಂದ ಆಕೆ ಖರೀದಿಸಿದ್ದ ಸ್ನೈಲ್ ರೈಸ್ ನೂಡಲ್ಸ್ ಬಾಕ್ಸಿನಲ್ಲಿ ಈ ಹಾವು ಪತ್ತೆಯಾಗಿತ್ತು. ‘‘ನಾನು ಕೆಲವು ತುತ್ತು ತಿಂದಾದ ಮೇಲೆ ಸಣ್ಣ ಹಾವೊಂದು ತರಕಾರಿಗಳೊಂದಿಗೆ ಇರುವುದನ್ನು ಗಮನಿಸಿದೆ,’’ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಕೂಡಲೇ ಅದರ ಚಿತ್ರಗಳನ್ನು ತೆಗೆದ ಆಕೆ ಅದನ್ನು ವಿ ಚ್ಯಾಟ್ ಮೂಲ ಶೇರ್ ಮಾಡಿದ್ದು ಕ್ಷಣ ಮಾತ್ರದಲ್ಲಿ ಅದು ಚೀನಾದಾದ್ಯಂತ ವೈರಲ್ ಆಗಿ ಬಿಟ್ಟಿತ್ತು.

ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ವಿಶ್ವವಿದ್ಯಾಲಯ ಕ್ಯಾಂಪಸ್ಸಿನ ಆಹಾರ ಮಳಿಗೆಯನ್ನು ಬಂದ್ ಮಾಡಲಾಯಿತು.

ಆಹಾರ ಮಳಿಗೆಯ ಮಾಲಕ ತನ್ನ ಪಾಕಶಾಲೆಯ ಮುಖಾಂತರ ಈ ಹಾವು ಬಂದಿಲ್ಲವೆಂದು ವಾದಿಸಿದರೂ ಆತನ ಪಾಕಶಾಲೆಯಲ್ಲಿ ಶುಚಿತ್ವ ಕಾಪಾಡದೇ ಇರುವುದನ್ನು ಗಮನಿಸಿ ಅದನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News