ಅಶ್ರಫ್ ಕೊಲೆ ಪ್ರಕರಣ: ಶೀಘ್ರದಲ್ಲಿ ದುಷ್ಕರ್ಮಿಗಳ ಸೆರೆ; ಎಡಿಜಿಪಿ ಅಲೋಕ್ ಮೋಹನ್
Update: 2017-06-22 14:13 IST
ಮಂಗಳೂರು, ಜೂ. 22: ಮುಹಮ್ಮದ್ ಅಶ್ರಫ್ ಕಲಾಯಿ ಅವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಗಾ ವಹಿಸುವುದಾಗಿ ಅವರು ಈ ಸಂದರ್ಭ ಹೇಳಿದರು.
ಅಶ್ರಫ್ ಕೊಲೆ ಪ್ರಕರಣದ ದುಷ್ಕರ್ಮಿಗಳ ಶೋಧಕ್ಕೆ 4 ತಂಡಗಳನ್ನು ರಚಿಸಲಾಗಿದೆ. ಕೊಲೆ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶೀಘ್ರವಾಗಿ ಬಂಧಿಸಲಾಗುವುದು ಎಂದ ಅವರು, ಎಸ್ ಪಿ, ಐಜಿಪಿ ಬಂಟ್ವಾಳ ದಲ್ಲಿ ಭದ್ರತೆ ನೋಡಿಕೊಳ್ಳುವರು, ಜೂ. 27ರ ವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದಾಗಿ ಅವರು ಈ ಸಂದರ್ಭ ಮಾಹಿತಿ ನೀಡಿದರು.