ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೊಂಚಿ ನಿವೃತ್ತಿ

Update: 2017-06-22 10:00 GMT

ವೆಲ್ಲಿಂಗ್ಟನ್, ಜೂ.22: ನ್ಯೂಝಿಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲ್ಯುಕ್ ರೊಂಚಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

36ರ ಹರೆಯದ ರೊಂಚಿ 2008ರಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಆಡುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿದ್ದರು. ಆಸೀಸ್‌ನ ಪರ 4 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದ ರೊಂಚಿ 2012ರಲ್ಲಿ ತಾಯ್ನೆಡು ನ್ಯೂಝಿಲೆಂಡ್‌ಗೆ ವಾಪಸಾಗಿದ್ದರು. ಒಂದು ವರ್ಷದ ಬಳಿಕ ಕಿವೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ರೊಂಚಿ ಒಟ್ಟು 4 ಟೆಸ್ಟ್, 81 ಏಕದಿನ ಹಾಗೂ 29 ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ.

ಇತ್ತೀಚೆಗೆ ಕೊನೆಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೊಂಚಿ ನ್ಯೂಝಿಲೆಂಡ್‌ನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು. ಟೂರ್ನಿಯಲ್ಲಿ ಆಸ್ಟ್ರೇಲಿಯದ ವಿರುದ್ಧ 43 ಎಸೆತಗಳಲ್ಲಿ 65 ರನ್ ಗಳಿಸಿದ್ದ ರೊಂಚಿ ಇಂಗ್ಲೆಂಡ್ ವಿರುದ್ಧ ಶೂನ್ಯ ಸುತ್ತಿದ್ದರು. ಬಾಂಗ್ಲಾದೇಶ ವಿರುದ್ಧ 16 ರನ್ ಗಳಿಸಿ ಔಟಾಗಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿರುವ ರೊಂಚಿ ಇಂಗ್ಲೆಂಡ್‌ನ ಲೈಸೆಸ್ಟರ್ ಕೌಂಟಿ ತಂಡದೊಂದಿಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News