ಮೊಂಟೆಪದವು: ಅಕ್ರಮ ಜಾನುವಾರು ಪತ್ತೆ; ಪೊಲೀಸ್ ವಶ
Update: 2017-06-22 19:39 IST
ಕೊಣಾಜೆ, ಜೂ. 22: ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿ ಕಸಾಯಿಖಾನೆಗೆ ಸಾಗಿಸಲೆಂದು ತೋಟದಲ್ಲಿ ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ 12 ಜಾನುವಾರುಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಮೊಂಟೆಪದವು ಶಾಲೆ ಸಮೀಪದ ತೋಟವೊಂದರಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಕೊಣಾಜೆ ಪೊಲೀಸರು ಮೊಂಟೆಪದವು ಸಮೀಪಕ್ಕೆ ತೆರಳಿ ಪರಿಶೀಲಿಸಿದಾಗ ವಾರಸು ದಾರರಿಲ್ಲದೆ ಜಾನುವಾರುಗಳನ್ನು ಕಟ್ಟಿ ಹಾಕಲಾಗಿತ್ತು ಎನ್ನಲಾಗಿದೆ.
3 ಕರುಗಳು ಸೇರಿದಂತೆ 9 ದನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಠಾಣೆ ಪೊಲೀಸರು ತಿಳಿಸಿದ್ದಾರೆ.