×
Ad

ಮೂಡುಬಿದಿರೆ ಜೈನಮಠದಲ್ಲಿ ಮುನಿಶ್ರೀ ವೀರಸಾಗರ

Update: 2017-06-22 19:49 IST

ಮೂಡುಬಿದಿರೆ, ಜೂ. 22:  ಪಾಣೆಮಂಗಳೂರಿನ ಶ್ರೀ 108 ಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಚಾತುರ್ಮಾಸಕ್ಕೆ ಮಹಾರಾಷ್ಟ್ರದ ದತ್ತವಾಡದಿಂದ ಆಗಮಿಸಿದ ಮುನಿಶ್ರೀ 108 ವೀರ ಸಾಗರ ಮಹಾರಾಜರು ಕಾರ್ಕಳ ಮಾರ್ಗವಾಗಿ ಬುಧವಾರ ಮೂಡುಬಿದಿರೆ ಶ್ರೀ ಜೈನ ಮಠಕ್ಕೆ ತಲುಪಿದರು.

ಹದಿನೆಂಟು ಬಸದಿಗಳ ಬೀಡು, ಜೈನಕಾಶಿ ಮೂಡುಬಿದಿರೆ ಪುಣ್ಯ ಭೂಮಿ ಭೇಟಿ ನೀಡಿರುವುದು ನನಗೆ ಆನಂದ ಉಂಟು ಮಾಡಿದೆ. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಇಲ್ಲಿ ಚಾತುರ್ಮಾಸ ಮಾಡುವುದಾಗಿ ತಿಳಿಸಿದ ಅವರು, ಪಾಣೆಮಂಗಳೂರಿನಲ್ಲಿ ನಡೆಯಲಿರುವ ತಮ್ಮ ನಾಲ್ಕನೇ ಚಾತುರ್ಮಾಸದ ಕುರಿತು ಮಾಹಿತಿ ನೀಡಿದರು.

ಮೂಡುಬಿದಿರೆ ಶ್ರೀ ಜೈನ ಮಠದ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮುನಿಶ್ರೀಯವರನ್ನು ಸ್ವಾಗತಿಸಿದರು. ಬಸದಿಗಳ ಮೊಕ್ತೇಸರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News