ಶಾಖಾಧಿಕಾರಿಯೇ ಇಲ್ಲದ ಪಡುಬಿದ್ರೆ ಮೆಸ್ಕಾಂ
Update: 2017-06-22 19:52 IST
ಪಡುಬಿದ್ರೆ, ಜೂ. 22: ಪಡುಬಿದ್ರೆ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಶಾಖಾಧಿಕಾರಿ ಬೇರೆಡೆಗೆ ವರ್ಗಾವಣೆಗೊಂಡು ಎಂಟು ತಿಂಗಳಾದರೂ ಹೊಸ ಶಾಖಾಧಿಕಾರಿಗಳ ನೇಮಕ ಮಾಡದೆ ಇರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೆಜಮಾಡಿ, ನಡ್ಸಾಲು, ಪಾದೆಬೆಟ್ಟು, ತೆಂಕ, ಬಡಾ ಕಂದಾಯ ಗ್ರಾಮಗಳನ್ನೊಳಗೊಂಡ ಪಡುಬಿದ್ರೆ ಮೆಸ್ಕಾಂ ಕಚೇರಿ ಅತೀ ದೊಡ್ಡ ವ್ಯಾಪ್ತಿಯನ್ನೊಳಗೊಂಡಿದೆ. ಅಲ್ಲದೆ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತಿವೆ. ಮಳೆಗಾಲ ದಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆ ಉಂಟಾಗುತಿದ್ದರೂ ಗ್ರಾಹಕರ ಸಮಸ್ಯೆಗಳಿಗೆ ಶಾಖಾ ಕಚೇರಿಯಲ್ಲಿ ಸರಿಯಾದ ಸ್ಪಂಧನೆ ದೊರಕುತಿಲ್ಲ ಎಂದು ಆರೋಪಿಸಿದ್ದಾರೆ.