ಹೊಸಂಗಡಿ: ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದಲ್ಲಿ ಇಫ್ತಾರ್ ಕೂಟ

Update: 2017-06-22 15:21 GMT

ಮಂಜೇಶ್ವರ, ಜೂ. 22: ಭಾರೀ ವಿರೋಧದ ನಡುವೆ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದಲ್ಲಿ ಹೊಸಂಗಡಿ ಹಿಲ್‌ಸೈಡ್ ಸಭಾಂಗಣದಲ್ಲಿ ಇಫ್ತಾರ್ ಸಂಗಮ ನಡೆಯಿತು.

ಇಫ್ತಾರ್ ಸಂಗಮವನ್ನು ಎಂ.ಆರ್.ಎಂ ರಾಜ್ಯಾಧ್ಯಕ್ಷ ನ್ಯಾಯವಾದಿ ನೌಶಾದ್ ಉದ್ಘಾಟಿಸಿದರು. ಬಿ.ಜೆ.ಪಿ ಅಲ್ಪಸಂಖ್ಯಾತ ಮೋರ್ಛಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ , ಎಂ.ಆರ್.ಎಂ ರಾಜ್ಯ ಕಾರ್ಯದರ್ಶಿ ಡಾ.ಉಮರ್ ಫಾರೂಕ್, ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಹಸನ್, ರಾಜ್ಯ ಕಾರ್ಯದರ್ಶಿ ಅಝೀಝ್ ಅಬ್ದುಲ್ಲ, ರಾಜ್ಯ ಕಾರ್ಯದರ್ಶಿ ಸುಮಾ, ಜಿಲ್ಲಾ ಕಾರ್ಯದರ್ಶಿ ಹನೀಫ್ , ರಾಜ್ಯ ಸಮಿತಿ ಸದಸ್ಯ ಶಫೀಕ್, ಜಿಲ್ಲಾ ಕಾರ್ಯದರ್ಶಿ ಸಿರಾಜ್ ಪಂಪ್ ವೆಲ್ , ಆರ್.ಎಸ್.ಎಸ್ ಮಂಡಲ ಕಾರ್ಯನಿರ್ವಾಹಕ್ ವೀರಪ್ಪ ಅಂಬಾರ್, ಬಿ.ಜೆ.ಪಿ ನೇತಾರರಾದ ಹರಿಶ್ಚಂದ್ರ ಮಂಜೇಶ್ವರ , ಪದ್ಮನಾಭ ಕಡಪ್ಪುರ, ಆದರ್ಶ್ ಮಂಜೇಶ್ವರ, ನ್ಯಾಯವಾದಿ ನವೀನ್ ಉಪಸ್ತಿತರಿದ್ದರು.

ಮುನೀರ್ ಉಪ್ಪಳ ಅಧ್ಯಕ್ಷತೆ ವಹಿಸಿದರು.

ಎಂ.ಆರ್.ಎಂ ಇಫ್ತಾರ್ ವಿರೋಧಿಸಿ ಮಸ್ಲಿಂ ಐಕ್ಯ ವೇದಿಯಿಂದ ಹೆದ್ದಾರಿ ಬದಿಯಲ್ಲೇ ಇಫ್ತಾರ್ ಸಂಗಮ.; ಪ್ರತಿಭಟನಾ ಮೆರವಣಿಗೆ:

ಮುಸ್ಲಿಂ ರಾಷ್ಟ್ರೀಯ ಮಂಚ್ ಇಫ್ತಾರ್ ಕೂಟದ ವಿರುದ್ಧ ಮುಸ್ಲಿಂ ಐಕ್ಯವೇದಿ ನೇತೃತ್ವದಲ್ಲಿ ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಬೃಹತ್ ಇಫ್ತಾರ್ ಸಂಗಮ ಹಾಗೂ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ವಿರೋಧ ವ್ಯಕ್ತ ಪಡಿಸಲಾಯಿತು.

ನೂರಾರು ಮಂದಿ ಇಫ್ತಾರ್ ಸಂಗಮದಲ್ಲಿ ಪಾಳ್ಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಭಾಗವಾಗಿ ಕುಂಬಳೆ ವೃತ್ತ ನಿರೀಕ್ಷಕ ಪಿ.ವಿ ಮನೋಜ್, ಮಂಜೇಶ್ವರ ಸಬ್ ಇನ್ಸ್‌ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಎಂ.ಆರ್.ಎಂ ಇಫ್ತಾರ್ ಕೂಟದ ವಿರುದ್ದ ವಾಟ್ಸಾಪ್ ಗಳಲ್ಲಿ ವ್ಯಾಪಕ ವಿರೋಧಿಸಿ ಚರ್ಚೆಗಳು ಹಾಗೂ ಸಂದೇಶಗಳು ರವಾನೆಯಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News