ಗೂರ್ಖಾ ಮುಖಂಡನ ವಿರುದ್ಧ ಕೊಲೆ ಆರೋಪ

Update: 2017-06-22 15:31 GMT

 ದಾರ್ಜಿಲಿಂಗ್, ಜೂ.22: ದಾರ್ಜಿಲಿಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಗೂರ್ಖಾ ಮುಖಂಡ ಬಿಮಲ್ ಗುರುಂಗ್ ಮತ್ತವರ ಪತ್ನಿ ಆಶಾ ಗುರುಂಗ್ ವಿರುದ್ಧ ಪ.ಬಂಗಾಲದ ಪೊಲೀಸರು ಕೊಲೆ ಆರೋಪ ದಾಖಲಿಸಿದ್ದಾರೆ.

ಇದೀಗ ಗುರುಂಗ್ ಮತ್ತು ಅವರ ಪತ್ನಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂನ್ 17ರಂದು ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಸಂಘಟನೆಯ ಮೂವರು ಸದಸ್ಯರು ಮೃತಪಟ್ಟಿರುವುದಾಗಿ ಗೂರ್ಖಾ ಜನಮುಖ್ತಿ ಮೋರ್ಛಾ(ಜಿಜೆಎಂ) ಹೇಳುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಪೊಲೀಸರು ಒಬ್ಬ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

  ಈ ಘಟನೆಯನ್ನು ಪ್ರತಿಭಟಿಸಿ ಮರುದಿನ , ಹೆಣಪೆಟ್ಟಿಗೆ ಹೊತ್ತುಕೊಂಡು ಜಿಜೆಎಂ ಕಾರ್ಯಕರ್ತರು ವೌನ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 22 ಕೇಸುಗಳನ್ನು ದಾಖಲಿಸಲಾಗಿತ್ತು. ಗುರುಂಗ್ ವಿರುದ್ಧ ದಾಖಲಾಗಿರುವ ಪ್ರಕರಣ ಇದರಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News