ಪಾಕ್ ಜಯಕ್ಕೆ ಸಂಭ್ರಮಾಚರಣೆ ಆರೋಪ: ದೇಶದ್ರೋಹದ ಪ್ರಕರಣ ಕೈಬಿಟ್ಟ ಪೊಲೀಸರು
Update: 2017-06-22 21:21 IST
ಬುರ್ಹಾನ್‌ಪುರ್, ಜೂ. 22: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿದ ಸಂದರ್ಭ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಹಾಗೂ ಪಟಾಕಿ ಸಿಡಿಸಿದ ಆರೋಪದಲ್ಲಿ ಬುರ್ಹಾನ್‌ಪುರ್ ಜಿಲ್ಲೆಯಿಂದ ಬಂಧಿಸಲಾಗಿದ್ದ 15 ಮಂದಿಯ ವಿರುದ್ಧದ ದೇಶ ದ್ರೋಹದ ಆರೋಪವನ್ನು ಮಧ್ಯಪ್ರದೇಶ ಪೊಲೀಸರು ಕೈಬಿಟ್ಟಿದ್ದಾರೆ.
ಅವರ ವಿರುದ್ಧ ದಾಖಲಿಸಲಾದ ದೇಶದ್ರೋಹದ ಪ್ರಕರಣ ಕೈ ಬಿಟ್ಟಿದ್ದೇವೆ. ಈ ಪ್ರದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದ ಬಗ್ಗೆ ಮಾತ್ರ ಪ್ರಕರಣ ದಾಖಲಿಸಿದ್ದೇವೆ ಎಂದು ಬುರ್ಹಾನ್‌ಪುರ್‌ನ ಪೊಲೀಸ್ ಅಧೀಕ್ಷಕ ಆರ್.ಆರ್.ಎಸ್. ಪರಿಹಾರ್ ತಿಳಿಸಿದ್ದಾರೆ.