ಮಂಗಳೂರು ಧರ್ಮಪ್ರಾಂತ್ಯದ ಪಾಲನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ.ನೊರೊನ್ಹಾ ಮರು ಆಯ್ಕೆ

Update: 2017-06-22 15:55 GMT

ಮಂಗಳೂರು, ಜೂ.22: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲೂಕು ವ್ಯಾಪ್ತಿಗೆ ಒಳಗೊಂಡ ಮಂಗಳೂರು ಧರ್ಮಪ್ರಾಂತವು 117 ಚರ್ಚ್‌ಗಳನ್ನು ಹೊಂದಿದ್ದು, ಸುಮಾರು 2.30 ಲಕ್ಷ ಸದಸ್ಯರನ್ನು ಹೊಂದಿದ್ದು, ಹಲವು ಶಾಲಾ ಕಾಲೇಜುಗಳು, ಆಶ್ರಮಗಳು, ವೈದ್ಯಕೀಯ ಸಂಸ್ಥೆಗಳನ್ನು ಹೊಂದಿದ್ದು, ಇವುಗಳನ್ನು ಪ್ರತಿನಿಧಿಸುವ ಮುಖಂಡರಿರುವ ನೂರಮೂವತ್ತು ಸದಸ್ಯರಿರುವ ಮಂಗಳೂರು ಧರ್ಮಪ್ರಾಂತ್ಯದ ಪಾಲನ ಪರಿಷತ್ತಿನ ಸಭೆಯು ಜೂ. 22ರಂದು ಬಿಷಪ್‌ರವರ ಸಭಾಂಗಣದಲ್ಲಿ ಜರಗಿತು.

ಅತಿ ವಂದನೀಯ ಬಿಷಪ್ ಸ್ವಾಮಿಯವರು ಪಾಲನ ಪರಿಷತ್ತಿನ ಅಧ್ಯಕ್ಷರಾಗಿ, ಶ್ರೇಷ್ಠಗುರುಗಳು ಪರಿಷತ್ತಿನ ಉಪಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಮಂಗಳೂರಿನ ಖ್ಯಾತ ವಕೀಲ ಹಾಗೂ ಸಿಂಡಿಕೇಟ್ ಸದಸ್ಯರಾದ ಶ್ರೀ. ಎಂ.ಪಿ. ನೊರೊನ್ಹರವರು ಸರ್ವಾನುಮತದಿಂದ ಮುಂದಿನ ಮೂರು ವರ್ಷ ಅವಧಿಗೆ ಚುನಾಯಿತರಾಗಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಯ್ ಕ್ಯಾಸ್ಟೊಲಿನೊ, ಅನಿಲ್ ಲೋಬೊ, ಜಾನ್ ಎಡ್ವಾರ್ಡ್ ಡಿಸಿಲ್ವ, ಹಿಲ್ಡಾ ಆಳ್ವ ಮತ್ತು ಎಲಿಜಬೆತ್ ರೋಚ್ ರವರು ಆಯ್ಕೆಯಾಗಿದ್ದಾರೆ.

ರಾಷ್ಟ್ರಿಯ ಪಾಲನ ಪರಿಷತ್ತಿಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರತಿನಿಧಿಯಾಗಿ ಶ್ರೀ. ಸುಶೀಲ್ ನೊರೊನ್ಹ ಮತ್ತು ಪ್ರೋಫೆಸರ್ ಜಾನ್ ಎಡ್ವರ್ಡ್ ಡಿಸಿಲ್ವರವರು ನೇಮಕಗೊಂಡಿರುತ್ತಾರೆ. 7 ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಎಲ್ಲಾ ಸಮಿತಿಗಳ ಪ್ರಧಾನ ಸಂಚಾಲಕರಾಗಿ ಶ್ರೇಷ್ಠಗುರು ವಂ. ಡೆನ್ಸಿಸ್ ಮೊರಸ್ ಪ್ರಭು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ.ನೊರೊನ್ಹಾರವರು ನೇಮಕಗೊಂಡರು. ಪರಿಷತ್ತಿನಲ್ಲಿ ಎಲ್ಲಾ ಸಂಘ-ಸಂಸ್ಥೆಗಳ ಕೇಂದ್ರಿಯ ಅಧ್ಯಕ್ಷರು, ನಿರ್ದೇಶಕರು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಇದ್ದು, ಶಾಶಕರಾದ ಜೆ.ಆರ್.ಲೋಬೊ ಮತ್ತು ಐವನ್ ಡಿಸೋಜ ಅವರು ಗೌರವ ಸದಸ್ಯರಾಗಿದ್ದಾರೆ.

ಎಂ.ಪಿ. ನೊರೊನ್ಹಾ ರವರು ತಮ್ಮ ಸಂದೇಶದಲ್ಲಿ ಪ್ರಸ್ತುತ ಪಾಲನ ಪರಿಷತ್ತಿನ ಸದಸ್ಯರ ಸಹಕಾರದೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ ರಾಷ್ಟ್ರದಲ್ಲಿ ಧಾರ್ಮಿಕ, ಶೈಕಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮಂಗಳೂರು ಧರ್ಮಪ್ರಾಂತ್ಯವು ಅತ್ಯುನತ್ತ ಸ್ಥಾನಕ್ಕೆ ಏರಲು ಪ್ರಯತ್ನಿಸುವುದಾಗಿ ತಿಳಿಸಿದರು. ಅತೀ ವಂಧನೀಯ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜರವರು ತಮ್ಮ ಸಂದೇಶದಲ್ಲಿ ಈ ಹಿಂದಿನ ಅವಧಿಯಲ್ಲಿ  ಎಂ.ಪಿ.ನೊರೊನ್ಹಾರವರು ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಕ್ರಿಯಶೀಲರಾಗಿ ಶ್ರಮಿಸಿರುತ್ತಾರೆ. ಇನ್ನು ಮುಂದೆಯೂ ಸಹಾ ಇವರ ನೇತ್ರತ್ವದ್ದಲ್ಲಿ ಇನ್ನು ಹೆಚ್ಚಿನ ಸಾಧನೆ ಆಗಲೆಂದು ಶುಭ ಹಾರೈಸಿದರು.

ಪರಿಷತ್ತಿನ ಸಭೆಯಲ್ಲಿ ಚಾನ್ಸಲರ್ ಅತೀ ವಂದನೀಯ ಹೆನ್ರಿ ಸಿಕ್ವೇರಾ, ಪ್ರೋಕುರೇಟರ್ ಜೋನ್ ವಾಸ್, ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ವಿಲಿಯಂ ಮಿನೇಜಸ್, ಸೆನೆಟ್ ಕಾರ್ಯದರ್ಶಿ ವಂ. ಜೆ.ಬಿ. ಸಲ್ಡಾನ, ಅತೀ ವಂ. ಪಿಯುಸ್ ಡಿಸೋಜ, ವಂ. ಜೆ.ಬಿ.ಕ್ರಾಸ್ತ, ಎಲಿಯಾಸ್ ಪೆರ್ನಾಂಡಿಸ್, ಅನಿಲ್ ಲೋಬೊ ಧರ್ಮಪ್ರಾಂತ್ಯದ ಎಲ್ಲಾ ವಿಕಾರ್ ವಾರ್‌ಗಳು, ಸಂಸ್ಥೆಗಳ ನಿರ್ದೇಶಕರು, ಧರ್ಮಭಗಿನಿಯರು ಧರ್ಮಪ್ರಾಂತ್ಯದ ಚುನಾಯಿತ ಧಾರ್ಮಿಕ ಹಾಗೂ ಜನಮಾನ್ಯ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News