ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2017-06-22 22:33 IST
ಬೈಂದೂರು, ಜೂ. 22: ಇಲ್ಲಿನ ನ್ಯೂ ಜನತಾ ಕಾಲನಿಯ ಮಾಧವ ಭಂಡಾರಿ (47) ಎಂಬವರು ಹೊರಗೆ ಹೋದವರು ನಾಪತ್ತೆಯಾಗಿದ್ದು, ಎಲ್ಲಾ ಕಡೆ ಹುಡುಕಿದ ಬಳಿಕ ಇಂದು ಬೆಳಗ್ಗೆ ಮನೆಯ ಪಕ್ಕದ ಪಾರ್ವತಿ ಪೂಜಾರಿ ಎಂಬವರ ಮನೆಯ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.