×
Ad

ಎನ್‌ಎಂಎ ರಿಯಾದ್ ಘಟಕದಿಂದ ಇಫ್ತಾರ್ ಕೂಟ

Update: 2017-06-22 22:39 IST

ಕುಂದಾಪುರ, ಜೂ.22: ಇಸ್ಲಾಂ ಎನ್ನುವುದು ಸಹೋದರತೆ, ಪರಸ್ಪರ ಪ್ರೀತಿ ವಿಶ್ವಾಸ, ನಂಬಿಕೆಯನ್ನು ಕಲಿಸಿ ಕೊಡುತ್ತದೆ. ಪ್ರಪಂಚದಾದ್ಯಂತ ಅನ್ಯಧರ್ಮಿಯರೊಡನೆ ಭಾವೈಕ್ಯತೆ, ಸೌಹಾರ್ದತೆಯನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇಂತಹಾ ಇಫ್ತಾರ್ ಕೂಟಗಳನ್ನು ಆಯೋಜಿಸಲು ಯುವಜನಾಂಗ ಮುಂದಾಗಬೇಕು ಎಂದು ಎನ್‌ಎಂಎ ರಿಯಾದ್ ಘಟಕದ ಅಧ್ಯಕ್ಷ ಸಯ್ಯದ್ ಅಸ್ಲಂ ಕೋಯಾ ಹೇಳಿದ್ದಾರೆ.

ರಿಯಾದ್‌ನ ಬಥಾದಲ್ಲಿರುವ ಸೋನಾ ರೆಸ್ಟೋರೆಂಟ್‌ನಲ್ಲಿ ಎನ್‌ಎಂಎ ವತಿಯಿಂದ ಹಮ್ಮಿಕೊಳ್ಳಲಾದ ಇಫ್ತಾರ್ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪವಿತ್ರ ರಮಝಾನ್ ಮಾಸದ ಪ್ರಾಮುಖ್ಯತೆಯನ್ನು ಹೇಳಿದ ಅವರು ಸಮಾಜ ಮುಖಿಯಾಗಿ ತನ್ನನ್ನು ತೊಡಗಿಸಿಕೊಂಡಿ ರುವ ಎನ್‌ಎಂಎನ ಕಾರ್ಯ ಚಟುವಟಿಕೆಗಳ ಪರಿಚಯ ನೀಡಿದರು. ಕುಂದಾಪುರದ ಕೋಡಿಯಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ಶೀಘ್ರ ನೆರವೇರುವುದರಲ್ಲಿ ಎಲ್ಲರೂ ಸಹಕಾರ ಪ್ರೋತ್ಸಾಹ ನೀಡಬೇಕೆಂದು ಸದಸ್ಯರಲ್ಲಿ ಮನವಿ ಮಾಡಿದರು. ರಮಝಾನ್ ಮಾಸದಲ್ಲಿ ಘಟಕದ ವತಿಯಿಂದ ಬಡವರಿಗೆ ವಿತರಿಸಲಾದ ಕಿಟ್‌ಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಎನ್‌ಎಂಎ ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವು ಸ್ಥಳೀಯ ಗಣ್ಯರು ಭಾಗವಹಿಸಿ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News