ಸುನ್ನಿ ಮುಸ್ಲಿಂ ಕ್ರಿಯಾ ಸಮಿತಿಯಿಂದ ಕಿಟ್ ವಿತರಣೆ
Update: 2017-06-23 16:44 IST
ಮಂಗಳೂರು, ಜೂ.23: ದ.ಕ.ಜಿಲ್ಲಾ ಸುನ್ನಿ ಮುಸ್ಲಿಂ ಕ್ರಿಯಾ ಸಮಿತಿ ವತಿಯಿಂದ ರಮಝಾನ್ ಪ್ರಯುಕ್ತ ಸಾಮೂಹಿಕ ವಸ್ತ್ರ, ಅಕ್ಕಿ, ನಮಾಝ್ ಲಿಬಾಸ್ ಅರ್ಹರಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯಾ ಸಮಿತಿ ಹಾಗು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ. ಅಹ್ಮದ್ ಜಮಾಲ್ ವಹಿಸಿದ್ದರು. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮುಸ್ಲಿಂ ಲೀಗ್ ಉಪಾಧ್ಯಕ್ಷ ಹಾಜಿ ಸೈಯದ್ ಬಾಷಾ ತಂಙಲ್, ಮುಸ್ಲಿಂ ಯೂತ್ ಲೀಗ್ ನಿಕಟಪೂರ್ವ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.
ಕ್ರಿಯಾ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ಸ್ವಾಗತಿಸಿ, ವಂದಿಸಿದರು.