ಉಡುಪಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ
ಉಡುಪಿ, ಜೂ.23: ಆದಿ ಉಡುಪಿಯಲ್ಲಿರುವ ಉಡುಪಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆರ್‌ಐಡಿಎಫ್ ಯೋಜನೆಯಡಿ ನೂತನವಾಗಿ ನಿರ್ಮಿಸಲಾದ ಉಡುಪಿ ರೈತ ಸಂಪರ್ಕ ಕೇಂದ್ರವನ್ನು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಉದ್ಘಾಟಿಸಿದರು.
2017-18ನೆ ಸಾಲಿನ ಯಾಂತ್ರಿಕೃತ ಯೋಜನೆಯಡಿ ಡೆನಿಸ್ ಡಿಸೋಜ ಬಾಳಕುದ್ರು, ರಾಜು ಬಂಗೇರ ಪಾಂಡೇಶ್ವರ, ಡಾ.ಸುಧೀಂದ್ರ ಹೆಬ್ಬಾರ್ ಪೆರಂಪಳ್ಳಿ, ರಾಜಕುಮಾರ ಭಟ್ ಕೊರಂಗ್ರಪಾಡಿ ಅವರಿಗೆ ಟ್ಯಾಕ್ಟರ್, ಅಕ್ಕಯ್ಯ ಪೂಜಾರ್ತಿ ಕುದಿ, ಶಿವರಾಮ ಶೆಟ್ಟಿ ಹಲುವಳ್ಳಿ ಅವರಿಗೆ ಟಿಲ್ಲರ್ ಹಾಗೂ ಮಂಜುನಾಥ ಭಟ್ ಬನ್ನಾಡಿ, ಬೋಜು ಪೂಜಾರಿ ನಯಂಪಳ್ಳಿ ಅವರಿಗೆ ಪವರ್ ವೀಡರ್ ಯಂತ್ರಗಳನ್ನು ಸಚಿವರು ಈ ಸಂದರ್ಭದಲ್ಲಿ ವಿತರಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬೆಂಗಳೂರು ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಉಡುಪಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯ್ಕಿ, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ಉಪಸ್ಥಿತರಿದ್ದರು.