ಕಡಿಯಾಳಿಯ ‘ಟ್ರಾಫಿಕ್ ಸಾಹೇಬ್ರು’ ಇನ್ನಿಲ್ಲ

Update: 2017-06-23 14:02 GMT

ಉಡುಪಿ, ಜೂ.23: ಟ್ರಾಫಿಕ್ ಸಾಹೇಬ್ರು ಎಂದೆ ಪ್ರಸಿದ್ದರಾಗಿದ್ದ ಇಂದಿರಾ ನಗರ ಚರ್ಚ್ ಶಾಲೆ ಬಳಿಯ ಕಸ್ತೂರ್ಬಾ ನಗರದ ಟಿ.ಎಸ್.ಅಬೂಬಕ್ಕರ್ (62) ಅಲ್ಪಕಾಲದ ಅಸೌಖ್ಯದಿಂದ ಜೂ.23ರಂದು ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾದರು.

ಕಡಿಯಾಳಿಯಲ್ಲಿ ಹಲವು ವರ್ಷಗಳಿಂದ ಕುಶನ್ ಕೆಲಸ ಮಾಡಿಕೊಂಡಿದ್ದ ಇವರಿಗೆ ಮಕ್ಕಳೆಂದರೆ ಅತೀವ ಪ್ರೀತಿ. ಕಲ್ಸಂಕ- ಕಡಿಯಾಳಿ ರಸ್ತೆ ಅಗಲ ಕಿರಿದಾಗಿದ್ದಾಗ ಹೆಚ್ಚು ಟ್ರಾಫಿಕ್‌ನಿಂದ ಕಡಿಯಾಳಿ ಶಾಲೆಯ ಮಕ್ಕಳು ರಸ್ತೆ ದಾಟಲು ಪಡುತ್ತಿದ್ದ ಕಷ್ಟವನ್ನು ಕಂಡ ಅಬೂಬಕ್ಕರ್ ತನ್ನ ಕೆಲಸವನ್ನು ಬಿಟ್ಟು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ಮಕ್ಕಳನ್ನು ರಸ್ತೆ ದಾಟಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದರು.

ಸುಮಾರು 30-35ವರ್ಷಗಳ ಕಾಲ ಮಕ್ಕಳನ್ನು ರಸ್ತೆ ದಾಟಿಸುವ ಸೇವೆ ಮಾಡುತ್ತಿದ್ದ ಇವರನ್ನು ಮಕ್ಕಳು ಟ್ರಾಫಿಕ್ ಸಾಹೇಬ್ರು ಎಂಬುದಾಗಿ ಕರೆಯು ತ್ತಿದ್ದರು. ಇವರ ಸಾಮಾಜಿಕ ಕಳಕಳಿಗೆ ಹಾಗೂ ಟ್ರಾಫಿಕ್ ವ್ಯವಸ್ಥೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇವರನ್ನು ಟ್ರಾಫಿಕ್ ವಾರ್ಡನ್ ಎಂಬುದಾಗಿ ನೇಮಿಸಿ ವಿಶೇಷ ಗೌರವವನ್ನು ನೀಡಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News