ಇನ್ನು ಪಾಸ್‌ಪೋರ್ಟ್ ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಲಭ್ಯ

Update: 2017-06-23 15:10 GMT

ಹೊಸದಿಲ್ಲಿ,ಜೂ.23: ಇನ್ನು ಮುಂದೆ ಪಾಸ್‌ಪೋರ್ಟ್‌ಗಳು ಇಂಗ್ಲಿಷ್ ಜೊತೆ ಹಿಂದಿ ಭಾಷೆಯನ್ನೂ ಒಳಗೊಂಡಿರುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಪ್ರಕಟಿಸಿದರು.
ಪಾಸ್‌ಪೋರ್ಟ್ ಕಾಯ್ದೆ, 1967ರ 50ನೇ ವರ್ಷಾಚರಣೆಯ ಸಂದರ್ಭ ಏರ್ಪಡಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಎಂಟು ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಅರ್ಜಿದಾರರಿಗೆ ಪಾಸ್‌ಪೋರ್ಟ್ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿಯನ್ನೂ ಘೋಷಿಸಿದರು.
ಪಾಸ್‌ಪೋರ್ಟ್‌ಗಳಲ್ಲಿ ವೈಯಕ್ತಿಕ ವಿವರಗಳು ಈಗ ಇಂಗ್ಲಿಷ್‌ನಲ್ಲಿ ಮಾತ್ರ ಮುದ್ರಣಗೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News