ಲಂಡನ್: ವ್ಯಾನ್ ಹರಿಸಿದ ವ್ಯಕ್ತಿಯ ವಿರುದ್ಧ ಭಯೋತ್ಪಾದನೆ ಆರೋಪ

Update: 2017-06-23 14:58 GMT

ಲಂಡನ್, ಜೂ. 23: ಈ ವಾರದ ಆದಿಭಾಗದಲ್ಲಿ ಮಸೀದಿಯೊಂದರಿಂದ ಹೊರಬರುತ್ತಿದ್ದ ವ್ರತಧಾರಿ ಮುಸ್ಲಿಮರ ಮೇಲೆ ವ್ಯಾನ್ ಹರಿಸಿ ದಾಳಿ ನಡೆಸಿದ ವ್ಯಕ್ತಿಯ ವಿರುದ್ಧ ಭಯೋತ್ಪಾದನೆ ಸಂಬಂಧಿ ಹತ್ಯೆ ಮತ್ತು ಹತ್ಯಾ ಯತ್ನ ಆರೋಪಗಳನ್ನು ಹೊರಿಸಲಾಗಿದೆ.

47 ವರ್ಷದ ಡ್ಯಾರನ್ ಒಸ್‌ಬೋರ್ನ್ ಸೋಮವಾರ ಮುಂಜಾನೆ ಫಿನ್ಸ್‌ಬರಿ ಪಾರ್ಕ್‌ನಲ್ಲಿ ಮುಸ್ಲಿಮರ ಗುಂಪೊಂದರ ಮೇಲೆ ವ್ಯಾನ್ ಹರಿಸಿದ್ದಾಗಿ ಆರೋಪಿಸಲಾಗಿದೆ.

ದಾಳಿಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, 11 ಮಂದಿ ಗಾಯಗೊಂಡಿದ್ದಾರೆ.

 ವೇಲ್ಸ್‌ನ ಕಾರ್ಡಿಫ್ ನಿವಾಸಿ, ನಾಲ್ಕು ಮಕ್ಕಳ ತಂದೆಯಾಗಿರುವ ಒಸ್‌ಬೋರ್ನ್ ಶುಕ್ರವಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರಾದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News