ಜೂ.24: ಆಳ್ವಾಸ್ ಪ್ರಗತಿ 2017- ಬೃಹತ್ ಉದ್ಯೋಗ ಮೇಳ

Update: 2017-06-23 15:01 GMT

ಮೂಡುಬಿದಿರೆ, ಜೂ.24: ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಸಹಸ್ರಾರು ಉದ್ಯೋಗಕಾಂಕ್ಷಿಗಳ ನಡುವೆ ಕೊಂಡಿಯಾಗಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಜೂನ್ 24, 25ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ನಡೆಯಲಿದೆ.

9ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ, ತೆಲಂಗಾಣ, ತಮಿಳುನಾಡು, ಅಸ್ಸಾಂ ಸಹಿತ ಹೊರರಾಜ್ಯಗಳಿಂದಲೂ ಸುಮಾರು 15 ಸಾವಿರ ಉದ್ಯೋಗಾಂಕ್ಷಿಗಳು ಬರುವ ನಿರೀಕ್ಷೆಯಿದೆ. ಸಾವಿರಾರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 200ಕ್ಕೂ ಅಧಿಕ ಕಂಪೆನಿಗಳು ವಿದ್ಯಾಗಿರಿಯತ್ತ ಬರುತ್ತಿವೆ. ವಿವಿಧ ಕಂಪೆನಿಗಳ 600ಕ್ಕೂ ಅಧಿಕ ಎಚ್‌ಆರ್‌ಗಳು ಅಭ್ಯರ್ಥಿಗಳನ್ನು ಸಂದರ್ಶಿಸಲಿದ್ದಾರೆ.
ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ವಿಶೇಷ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ. ಕಂಪೆನಿಗಳ ಸಂದರ್ಶನದ ಮೊದಲು, ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಲು ಹಾಗೂ ಅವರಲ್ಲಿರುವ ಗೊಂದಲಗಳನ್ನು ನಿವಾರಿಸಲು ಕ್ಲಾರಿಟಿ ಕೇಂದ್ರವನ್ನೂ ತೆರೆಯಲಾಗಿದೆ. 1500 ಸ್ವಯಂಸೇವಕರು ವಿವಿಧ ರೀತಿಯಲ್ಲಿ ಅಭ್ಯರ್ಥಿಗಳಿಗೆ ಹಾಗೂ ಕಂಪೆನಿಳ ಎಚ್‌ಆರ್‌ಗಳಿಗೆ ನೆರವಾಗಲಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿ, ಐಟಿ, ಐಟಿಈಎಸ್, ಮ್ಯಾನುಫ್ಯಾಕ್ಚರಿಂಗ್, ಸೇಲ್ಸ್ ಹಾಗೂ ರಿಟೇಲ್ಸ್, ಬ್ಯಾಂಕಿಂಗ್ ಹಾಗೂ ಫಿನಾನ್ಸ್, ಹೊಸ್ಪಿಟ್ಯಾಲಿಟಿ, ಎನ್‌ಜಿಒ ಹಾಗೂ ಶಿಕ್ಷಣ ಕ್ಷೇತ್ರವನ್ನು ತೆರದಿಡಲಿದೆ. ಈ ಉದ್ಯೋಗಮೇಳವು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯ ವಿವಿಧ ಕ್ಷೇತ್ರಗಳಾದ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ವಾಣಿಜ್ಯ, ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ, ಹಾಗೂ ಕೌಶಲಭರಿತ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಸೂಕ್ತವಾದ ಉದ್ಯೋಗ ಪಡೆಯಲು ಪ್ರಗತಿ ಉತ್ತಮ ಅವಕಾಶವಾಗಿದೆ. ಆಳ್ವಾಸ್ ಸಂಸ್ಥೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅರ್ಹ ಅಭ್ಯರ್ಥಿಗಳಿಗೂ ಉದ್ಯೋಕವಾಶಕ್ಕೆ ಕೊಂಡಿಯಾಗಿರುತ್ತಿದ್ದು, ಯುವ ಶಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬದುಕು ರೂಪಿಸಬೇಕೆಂದು ತಿಳಿಸಿದ್ದಾರೆ.
 

ಪ್ರಮೋದ್ ಮದ್ವರಾಜ್‌ರಿಂದ ಚಾಲನೆ: ಜೂನ್ 24 ರಂದು ವಿದ್ಯಾಗಿರಿಯಲ್ಲಿ ಬೆಳಗ್ಗೆ 9:30 ಕ್ಕೆ ಕ್ರೀಡಾ ಹಾಗೂ ಯುವಜನ ಸೇವಾ ಖಾತೆಯ ಸಚಿವ ಪ್ರಮೋದ್ ಮದ್ವರಾಜ್ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಬುದಾಬಿಯಲ್ಲಿರುವ ಬಿಆರ್‌ಎಸ್ ವೆಂಚರ್ಸ್‌ನ ಸಿಇಒ ಬಿನಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಅುರನಾಥ್ ಶೆಟ್ಟಿ ಉಪಸ್ಥಿತರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News