ನಾಟಾ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ

Update: 2017-06-23 15:23 GMT

ಮೂಡುಬಿದಿರೆ, ಜೂ. 23: ನ್ಯಾಶನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಅರ್ಕಿಟೆಕ್ಚರ್ (ಎನ್‌ಎಟಿಎ-ನಾಟಾ) ಫಲಿತಾಂಶದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಕುಳಿತ 216 ಮಂದಿ ವಿದ್ಯಾರ್ಥಿಗಳಲ್ಲಿ 181 ತೇರ್ಗಡೆಯಾಗಿ ಎಲ್ಲರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯಮಟ್ಟದಲ್ಲಿ ಪ್ರಕಟಿಸುವ ರ್ಯಾಂಕ್ ಪಟ್ಟಿಯಲ್ಲೂ ಉತ್ತಮ ರ್ಯಾಂಕ್ ಪಡೆದಿದ್ದಾರೆ.

ಆಳ್ವಾಸ್‌ನ ವಿದ್ಯಾರ್ಥಿ ಶ್ರೀನಿಧಿ ತ್ಯಾಸಿನ್ ವಿದ್ಯಾರ್ಥಿ 10ನೇ ರ್ಯಾಂಕ್, ಕಾಲೇಜಿನ ಐದು ವಿದ್ಯಾರ್ಥಿಗಳು 100ರ ಒಳಗೆ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

 ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳು: ಶ್ರೀನಿಧಿ ತ್ಯಾಸಿನ್ (10ನೇ ರ್ಯಾಂಕ್), ಶ್ರೀನಾಥ್ ವಿ.ಮೆನನ್ (51ರ್ಯಾಂಕ್), ನಿಶ್ಮಿತಾ ಎಂ.ಪೂಜಾರಿ (58ರ್ಯಾಂಕ್), ರಂಜನಾ ಹೆಚ್ (78), ಶಿವಾಲಿ.ಸಿ (98), ಕೃತಿ ಜಿ. (107), ಸಾಗರ್ ಅಗರ್‌ವಾಲ್ (108), ಆದರ್ಶ ಹೆಬ್ಬಾರ್ ವೈ.ಎಸ್(118).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News