ಕೆಎಸ್ಸಾರ್ಟಿಸಿ ಗ್ರಾಮೀಣ ಸಾರಿಗೆ ಬಸ್‌ಗಳ ಸಮಯ ಮರುನಿಗದಿಗೆ ಹೈಕೋರ್ಟ್ ಆದೇಶ

Update: 2017-06-23 16:13 GMT

ಉಡುಪಿ, ಜೂ.23: ಕೆಎಸ್ಸಾರ್ಟಿಸಿ ಉಡುಪಿಯಿಂದ ಗ್ರಾಮೀಣ ಪ್ರದೇಶಗಳಿಗೆ ಇತ್ತೀಚೆಗೆ ಆರಂಭಿಸಿರುವ ನರ್ಮ್ ಬಸ್‌ಗಳ ಓಡಾಟದ ಸಮಯವನ್ನು ಪುನರ್‌ನಿಗದಿ ಪಡಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದೆ.


 ಈ ಬಗ್ಗೆ ಉಡುಪಿಯ ಖಾಸಗಿ ಬಸ್ ಮಾಲಕರ ಸಂಘ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ಈ ಆದೇಶವನ್ನು ನೀಡಿದೆ ಎಂದು ಉಡುಪಿಯ ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ ತಿಳಿಸಿದರು. ಆರ್‌ಟಿಓ ಅವರು ಎಲ್ಲರೊಂದಿಗೆ ಸಮಾಲೋಚಿಸಿ ಸಮಯ ನಿಗದಿಪಡಿಸದಿರುವುದನ್ನು ಪ್ರಶ್ನಿಸಿ ಖಾಸಗಿ ಬಸ್ ಮಾಲಕರು ಈ ದಾವೆ ಹೂಡಿದ್ದರು.


ಇದರಿಂದ ಮೊದಲಿನಿಂದಲೂ ಓಡಾಡುತ್ತಿರುವ 18 ನರ್ಮ್ ಸಿಟಿ ಬಸ್‌ಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅನಂತರ ಗ್ರಾಮಾಂತರ ಸಾರಿಗೆಯ 30 ಪರ್ಮಿಟ್‌ಗಳ ಸಮಯವನ್ನು ಮರುನಿಗದಿ ಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಇದರಿಂದ ಮೊದಲಿನಿಂದಲೂ ಓಡಾಡುತ್ತಿರುವ 18 ನರ್ಮ್ ಸಿಟಿ ಬಸ್‌ಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅನಂತರ ಗ್ರಾಮಾಂತರ ಸಾರಿಗೆಯ 30 ಪರ್ಮಿಟ್‌ಗಳ ಸಮಯವನ್ನು ಮರುನಿಗದಿ ಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು. ಈ ಬಗ್ಗೆ ನ್ಯಾಯಾಲಯದ ಆದೇಶವಿನ್ನೂ ನಮ್ಮ ಕೈಸೇರಿಲ್ಲ. ಆದೇಶ ಕೈಸೇರಿದ ಬಳಿಕ ಅದನ್ನು ಪರಿಶೀಲಿಸಿ ಬಸ್‌ಗಳ ಸಂಚಾರಕ್ಕೆ ಯಾವುದೇ ವ್ಯತ್ಯಯ ವಾಗದಂತೆ ಸಮಸ್ಯೆ ಬಗೆಹರಿಸಲಾುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News