ಗ್ರಾಪಂ ಚುನಾವಣೆ: 6 ಮಂದಿ ಕಣದಲ್ಲಿ

Update: 2017-06-23 16:33 GMT

ಉಡುಪಿ, ಜೂ.23: ಉಡುಪಿ ಮತ್ತು ಕುಂದಾಪುರ ತಾಲೂಕುಗಳ ಮೂರು ಗ್ರಾಪಂಗಳ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಪಂನ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.

ಕುಂದಾಪುರ ತಾಲೂಕಿನ ಜಡ್ಕಲ್ ಗ್ರಾಪಂನ ಒಂದು, ಹೊಸಂಗಡಿ ಗ್ರಾಪಂನ ಒಂದು ಹಾಗೂ ಉಡುಪಿ ತಾಲೂಕಿನ ಕೋಟೆ ಗ್ರಾಪಂನ ಒಂದು ಸ್ಥಾನಕ್ಕೆ ತಲಾ ಇಬ್ಬರು ಸ್ಪರ್ಧಾಕಣದಲ್ಲಿದ್ದಾರೆ. ಮೂರು ಸ್ಥಾನಗಳಿಗೆ ಮತದಾನ ಜು.2ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News