ಸಲ್-ಸಬೀಲ್ ವಿದ್ಯಾರ್ಥಿ ಸಂಘಟನೆಯಿಂದ ಮಸೀದಿಗೆ ಕೊಡುಗೆ

Update: 2017-06-23 16:55 GMT

ವಿಟ್ಲ, ಜೂ. 23: ಪಾಣೆಮಂಗಳೂರು ಸಮೀಪದ ಬೋಗೋಡಿ ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ವತಿಯಿಂದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಗೆ ಡಸ್ಟ್ ಬಿನ್ ಕೊಡುಗೆಯಾಗಿ ನೀಡಲಾಯಿತು.
     
ಸಲ್-ಸಬೀಲ್ ಎಸೋಸಿಯೇಶನ್ ಅಧ್ಯಕ್ಷ ಉಬೈದ್ ಬೋಗೋಡಿ ಅವರು ಮಸೀದಿ ಅಧ್ಯಕ್ಷ ಅಬೂಬಕರ್ ಬಾವ ಹಾಜಿ ಅವರಿಗೆ ಡಸ್ಟ್ ಬಿನ್ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಉಮ್ಮರ್ ಸಾಬಿತ್ ಬೋಗೋಡಿ, ಕೋಶಾಧಿಕಾರಿ ರಾಫಿದ್ ಬೋಗೋಡಿ, ಮಸೀದಿ ಪದಾಧಿಕಾರಿಗಳಾದ ಪಿ.ಎಂ. ಆಸಿಫ್ ಅಬೂಬಕರ್ ಮೆಲ್ಕಾರ್, ಆರ್. ಸುಲೈಮಾನ್ ಉಪ್ಪುಗುಡ್ಡೆ, ರಫೀಕ್ ಬಂಗ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News