​ಮದ್ರಸ ಪರೀಕ್ಷೆ: ಸಜಿಪ ರೇಂಜ್ ಮಟ್ಟದಲ್ಲಿ ಆಲಾಡಿ ಮದ್ರಸಕ್ಕೆ ಅಗ್ರಸ್ಥಾನ

Update: 2017-06-23 16:57 GMT

ವಿಟ್ಲ, ಜೂ. 23: ಸಮಸ್ತ ಕೇರಳ ಇಸ್ಲಾಮಿಕ್ ಶೈಕ್ಷಣಿಕ ಮಂಡಳಿ ಕಳೆದ ಸಾಲಿನಲ್ಲಿ ನಡೆಸಿದ +2 ತರಗತಿಯ ಮದ್ರಸ ಪರೀಕ್ಷೆಯಲ್ಲಿ ಸಜಿಪಮುನ್ನೂರು ಗ್ರಾಮದ ಆಲಾಡಿ ನೂರುಲ್ ಹುದಾ ಮದ್ರಸ ನೂರು ಶೇಕಡಾ ಫಲಿತಾಂಶ ದಾಖಲಿಸಿ ಸಜಿಪ ರೇಂಜ್ ಮಟ್ಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಇಲ್ಲಿನ ವಿದ್ಯಾರ್ಥಿನಿಯರಾದ ಉಮೈರಾ ಬಾನು ಹಾಗೂ ಆಯಿಷಾ ರಶೀದಾ 76% ಅಂಕದೊಂದಿಗೆ ರೇಂಜ್ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಕಬೀರ್ ಗಡಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮದ್ರಸದ ಶೈಕ್ಷಣಿಕ ಸಾಧನೆಗೆ ಶ್ರಮಿಸಿದ ಮುಖ್ಯೋಪಾಧ್ಯಾಯ ಪಿ.ಎ.ಎಂ. ಶರೀಫ್ ಮೌಲವಿ ಅವರನ್ನು ಮಸೀದಿ ಆಡಳಿತ ಸಮಿತಿ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News