ಪಾಣೆಮಂಗಳೂರು: ಸೌಹಾರ್ದ ಇಫ್ತಾರ್ ಕೂಟ

Update: 2017-06-23 17:00 GMT

ವಿಟ್ಲ, ಜೂ. 23: ಪಾಣೆಮಂಗಳೂರು-ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಮಲ್ಟಿ ಫಿಟ್ನೆಸ್ ಜಿಮ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು ಜಿಮ್ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯ ಎಲ್ಲ ಜಾತಿ ಧರ್ಮದವರು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ನಾಗರಿಕ ಸಮಾಜದಲ್ಲಿ ಹೊರಟು ಹೋಗುತ್ತಿರುವ ಮಾನವೀಯತೆ ಹಾಗೂ ಸಾಮರಸ್ಯವನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಇಂತಹ ಸೌಹಾರ್ದಯುತ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂಬ ಹಿನ್ನಲೆಯಲ್ಲಿ ಜಿಮ್ ಮಾಲಕರು ಈ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಜಿಮ್ ಮಾಲಕ ಹಾಗೂ ತರಬೇತುದಾರರಾದ ಇಲ್ಯಾಸ್ ಹಾಗೂ ರಫೀಕ್ ಇಫ್ತಾರ್ ಕೂಟದ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News