ಅಪಹರಣ ಪ್ರಕರಣ: ಕೃತ್ಯದಲ್ಲಿ ಪಾಲ್ಗೊಂಡ ಓರ್ವ ಪೊಲೀಸ್ ವಶಕ್ಕೆ
Update: 2017-06-23 22:40 IST
ಉಳ್ಳಾಲ, ಜೂ.23: ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪ ಉಚ್ಚಿಲದಲ್ಲಿ ಬುಧವಾರ ರಾತ್ರಿ ನಡೆದ ಬೈಕ್ ಕಾರು ಢಿಕ್ಕಿ ಪ್ರಕರಣದಲ್ಲಿ ಬೈಕ್ ಸವಾರರು ಹಾಗೂ ಸಹಚರರಿಂದ ಅಪಹರಣಕ್ಕೊಳಗಾದ ಕಾರು ಮಾಲಿಕ ಕೊಟ್ಟ ಮಾಹಿತಿಯಂತೆ ಅಪಹರಣಕಾರರ ಪೈಕಿ ಅಜ್ಜಿನಡ್ಕದ ಸಾದಿಕ್(24)ನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃತ್ಯದಲ್ಲಿ ಪಾಲ್ಗೊಂಡ ಆರು ಮಂದಿಯ ಪೈಕಿ ಉಳಿದ ಐದು ಮಂದಿ ಮಂಜೇಶ್ವರ ಕಡಂಬಾರು ನಿವಾಸಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ತಂಡವು ಈ ಹಿಂದೆಯೂ ಕೃತ್ಯದಲ್ಲಿ ಪಾಲ್ಗೊಂಡು ಇದನ್ನೇ ಕಸುಬಾಗಿಸಿಕೊಂಡಿದ್ದು,ಈ ಹಿಂದೆ ಕೊಣಾಜೆ ಬಳಿ ಶಿಕಾರಿಗೆ ತೆರಳುತ್ತಿದ್ದ ತಂಡವೊಂದರ ವಾಹನಕ್ಕೆ ಢಿಕ್ಕಿ ಹೊಡೆಸಿ ಹಣ ಪಡೆದಿದ್ದರು ಎನ್ನಲಾಗಿದೆ.