ಭಟ್ಕಳದ ಮ್ಯಾಥ್ಯೂ ರಿಂದ ಛತ್ತೀಸ್ಗಡ್ ದಲ್ಲಿ ಕಾರ್ಯಾಗಾರ

Update: 2017-06-23 17:58 GMT

ಭಟ್ಕಳ, ಜೂ. 23: ತಾಲೂಕಿನ ಬೇಂಗ್ರೆ ಮತ್ತು ಮುರುಡೇಶ್ವರದಲ್ಲಿ ಕಳೆದ 25 ವರ್ಷಗಳಿಂದ ಲಾವಂಚ ಕರಕುಶಲಕರ್ಮಿಯಾಗಿರುವ ಎಂ.ಡಿ ಮ್ಯಾಥ್ಯೂ ಛತ್ತೀಸ್ಗಡ್ ದ ರಾಯಪುರದ ಅರಣ್ಯ ಇಲಾಖೆಯಿಂದ ಜರಗಿದ ಲಾವಂಚ ಕಾರ್ಯಾಗಾರದಲ್ಲಿ ಭಾಗವಹಿಸಿ ವಿವಿಧ ಕರಕುಶಲ ವಸ್ತುಗಳ ಕುರಿತು ಒಂದು ದಿನದ ತರಬೇತಿಯನ್ನು ನೀಡಿದರು.

ಭಟ್ಕಳ ತಾಲೂಕಿನ ಬೇಂಗ್ರೆ ಮತ್ತು ಮುರ್ಡೇಶ್ವರದಲ್ಲಿ ಉಶೀರಾ ಇಂಡಸ್ಟ್ರೀಸ್ ಮೂಲಕ ಕಳೆದ 25 ವರ್ಷಗಳಿಂದ ಎಂ.ಡಿ. ಮ್ಯಾಥ್ಯೂರವರು ಲಾವಂಚದಿಂದ ಅನೇಕ ವಿಧದ ಕರಕುಶಲ ವಸ್ತುಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದಾರೆ ಹಾಗೂ ನೂರಾರು ಬಡ ಮಹಿಳೆಯರಿಗೆ, ವಿಕಲಚೇತನರಿಗೆ ಉದ್ಯೋಗ ನೀಡಿದ್ದಾರೆ. ಕಾರ್ಯಾಗಾರದಲ್ಲಿ ಎಂ.ಡಿ ಮ್ಯಾಥೂರವರ ಭಾಷಾನುವಾದಕರಾಗಿ ಪ್ರಶಾಂತ ಮ್ಯಾಥೂ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News