ಕಾಕಿನಾಡ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳ ವಿಚಿತ್ರ ಶಿಶು ಜನನ

Update: 2017-06-24 05:46 GMT

ಕಾಕಿನಾಡ, ಜೂ.24: ಆಂಧ್ರ ಪ್ರದೇಶದ ರಾಜಮಹೇಂದ್ರವರಂ ಸಮೀಪದ ಕಾಕಿನಾಡದ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳುಳ್ಳ ವಿಚಿತ್ರ ಶಿಶುವೊಂದು ಜನಿಸಿದೆ. ಮಂಡಪೇಟ ಮಂಡಲಂ ಎಂಬಲ್ಲಿನ ತಪಸ್ವರಂ ಗ್ರಾಮದ 25 ವರ್ಷದ ಮಹಿಳೆ ಮಣಿ ಎಂಬವರು ಈ ಶಿಶುವಿಗೆ ಜನ್ಮ ನೀಡಿದ್ದು ಮಗುವಿನ ಕಾಲುಗಳು ಹೊಟ್ಟೆಗೆ ಅಂಟಿಕೊಂಡಿವೆ.

ಇಂತಹ ಶಿಶುಗಳು ಬಲು ಅಪರೂಪವಾಗಿದ್ದು, ಪ್ರತೀ 10 ಲಕ್ಷ ಪ್ರಸವ ಪ್ರಕರಣಗಳಲ್ಲಿ ಒಬ್ಬರು ಇಂತಹ ಮಗುವಿಗೆ ಜನ್ಮ ನೀಡಬಹುದು ಎಂದು ಆಸ್ಪತ್ರೆಯ ಮಕ್ಕಳ ತಜ್ಞೆ ಮಾಣಿಕ್ಯಾಂಬ ಹೇಳಿದ್ದಾರೆ.

ತಾಯಿ, ಮಗು ಆರೋಗ್ಯವಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ. ಮಗುವನ್ನು ಎನ್‌ಐಸಿಯುವಿನಲ್ಲಿಟ್ಟ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಾಲ್ಕು ಕಾಲುಗಳ ಶಿಶುವನ್ನು ನೋಡಲು ಭಾರೀ ಸಂಖ್ಯೆಯ ಜನರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News