×
Ad

ಕೆಕೆಎಂಎ ಕರ್ನಾಟಕ ಶಾಖೆಯ ವತಿಯಿಂದ ನಿರ್ವಸಿತರಿಗೆ ಮನೆ ಹಸ್ತಾಂತರ

Update: 2017-06-24 11:22 IST

ಬಿ.ಸಿ.ರೋಡ್, ಜೂ.24: ಕೆಕೆಎಂಎ ಕರ್ನಾಟಕ ಶಾಖೆಯ ವತಿಯಿಂದ ನಿರ್ವಸಿತರಿಗೆ ಮನೆ ಯೋಜನೆಯಡಿ ಬಿ.ಸಿ. ರೋಡಿನ ತಾಳಿಪಡ್ಪು ಹಾಗೂ ಮುಲ್ಲಾರಪಟ್ನದಲ್ಲಿ 2 ಮನೆಗಳನ್ನು ಹಸ್ತಾಂತರಿಸಲಾಯಿತು.

ತಾಳಿಪಡ್ಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 5ನೆ ಮನೆಯ ಕೀಲಿಕೈಯನ್ನು 3 ಮಕ್ಕಳ ತಾಯಿಯಾಗಿರುವ ವಿಧವೆಯೊಬ್ಬರಿಗೆ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಹಸ್ತಾಂತರಿಸಿದರು. 6 ಮನೆಯ ಕೀಲಿಕೈಯನ್ನು ಮುಲ್ಲಾರಪಟ್ನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2 ಮಕ್ಕಳ ತಾಯಿಯಾಗಿರುವ ವಿಧವೆಯೊಬ್ಬರಿಗೆ ಮುಲ್ಲಾರಪಟ್ನ ಮಸ್ಜಿದ್ ಖತೀಬ್ ಹಸ್ತಾಂತರಿಸಿದರು.

ಈ ಸಂದರ್ಭ ಕೆಕೆಎಂಎ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ  ಬಿ.ಎಂ. ಇಕ್ಬಾಲ್, ಸಲಹೆಗಾರ ಎಸ್.ಎಂ. ಬಶೀರ್, ಕೆಕೆಎಂಎ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಅಯ್ಯೂಬ್ ಸೂರಿಂಜೆ, ಕರ್ನಾಟಕ ರಾಜ್ಯ ಕೋ-ಆರ್ಡಿನೇಟರ್ ಎಸ್.ಎಂ. ಫಾರೂಕ್, ಎಸ್.ಎಂ. ಬಾಷಾ, ಸಲಾಮ್ ಉಚ್ಚಿಲ, ಕರೀಮ್ ತುಂಬೆ, ಅಝೀಮ್ ರಝಾಕ್ ಹಾಗೂ ಇತರ ಕೆಕೆಎಂಎ ಸದಸ್ಯರು ಉಪಸ್ಥಿತರಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News