×
Ad

ಜೂ.29ರಿಂದ ಜುಲೈ 3ರವರೆಗೆ ಮಡವೂರ್ ಸಿ.ಎಂ.ಮಖಾಂ ಶರೀಫ್ 27ನೆ ಉರೂಸ್ ಕಾರ್ಯಕ್ರಮ

Update: 2017-06-24 11:39 IST

ವಿಟ್ಲ, ಜೂ.24: ದಕ್ಷಿಣ ಭಾರತದ ಸುಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಡವೂರ್ ಸಿ.ಎಂ.ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುಲ್ಲಾಹಿ ಸಿ.ಎಂ.ಮುಹಮ್ಮದ್ ಅಬೂಬಕರ್( ಖ.ಸಿ.)ರವರ '27ನೆ ಉರೂಸ್ ಮುಬಾರಕ್-2017' ಜೂನ್ 29ರಿಂದ ಜುಲೈ 3ರ ತನಕ ನಡೆಯಲಿದೆ ಎಂದು ಅನಿಲಕಟ್ಟೆ-ಮಡವೂರ್ ಸಿ.ಎಂ. ಯತೀಂಖಾನ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ಇದರ ಕನ್ವೀನರ್ ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ.

ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಐದು ದಿನಗಳ ಕಾಲ ಮತಪ್ರವಚನ, ಸಿ.ಎಂ. ಅನುಸ್ಮರಣೆ, ಮಜ್ಲಿಸುನ್ನೂರು, ಸ್ವಲಾತ್ ಮಜ್ಲಿಸ್, ಅನ್ನದಾನ ಮುಂತಾದ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಉರೂಸ್ ಮುಬಾರಕ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿಗಳಾಗಿ ಸೈಯದ್ ಎನ್.ಪಿ.ಎಂ.ಝೈನುಲ್ ಆಬೀದೀನ್ ತಂಙಳ್ ಕುನ್ನುಂಗೈ, ಮಿತ್ತಬೈಲ್ ಉಸ್ತಾದ್, ಕುಕ್ಕಾಜೆ ತಂಙಳ್, ಕಿನ್ಯ ತಂಙಳ್, ಹಬೀಬ್ ತಂಙಳ್, ಪಾತೂರು ಉಸ್ತಾದ್, ಕಿನ್ಯ ದಾರಿಮಿ, ಉದ್ಯಾವರ ತಂಙಳ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಇಬ್ರಾಹೀಂ ಮುಸ್ಲಿಯಾರ್ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಅನಿಲಕಟ್ಟೆ-ಮಡವೂರ್ ಸಿ.ಎಂ.ಯತೀಂಖಾನ ಎಜುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ಗೌರವಾಧ್ಯಕ್ಷ ಸೈಯದ್ ಹುಸೈನ್ ಬಾಅಲವಿ ತಂಙಳ್  ಕುಕ್ಕಾಜೆ, ಜತೆ ಕನ್ವೀನರ್ ಗಳಾದ ಅಬೂಬಕರ್ ಅನಿಲಕಟ್ಟೆ, ಅಬೂಬಕರ್ ಮಗಿಲಪದವು.ಕೆ.ಎ.ಹಸೈನಾರ್ ಮುಸ್ಲಿಯಾರ್, ರಝಾಕ್ ಹಾಜಿ, ಮುಹಮ್ಮದ್ ಮುಸ್ಲಿಯಾರ್ ನೂಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News