×
Ad

ಜನರು ಭೇಟಿ ನೀಡಲು ಹೆದರುವ ಏಕೈಕ ಹಿಂದು ದೇಗುಲ !

Update: 2017-06-24 14:10 IST

ಭಾರತವು ದೇವಸ್ಥಾನಗಳ ನೆಲೆವೀಡಾಗಿದೆ. ದೇಶದಲ್ಲಿ ಎಷ್ಟೊಂದು ದೇವಸ್ಥಾನಗಳಿವೆ ಎಂದರೆ ಜನರಿಗೆ ಅವುಗಳ ಲೆಕ್ಕವೇ ಮರೆತುಹೋಗಿದೆ. ಆದರೂ ಆವರಣದಲ್ಲಿ ಕಾಲಿಡಲೂ ಜನರು ಹೆದರುತ್ತಿರುವ ದೇವಸ್ಥಾನವೊಂದು ಈ ದೇಶದಲ್ಲಿದೆ! ಇದು ಹೆಚ್ಚಿನವರಿಗೆ ಗೊಂದಲವನ್ನುಂಟು ಮಾಡಬಹುದು, ಆದರೆ ಇಂತಹ ದೇವಸ್ಥಾನ ವೊಂದಿರುವುದು ನಿಜ. ಅದು ಯಮರಾಜನ ದೇವಸ್ಥಾನ!

ಇದು ಈ ಭೂಗ್ರಹದಲ್ಲಿರುವ ಮರಣ ದೇವತೆ ಯಮರಾಜನ ಏಕೈಕ ದೇವಸ್ಥಾನ ವಾಗಿದ್ದು, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರವೌರ್‌ನಲ್ಲಿದೆ.

ಈ ದೇವಸ್ಥಾನವು ಒಂದು ಮನೆಯಂತೆ ಕಾಣುತ್ತಿದ್ದರೂ ಜನರು ಒಳಪ್ರವೇಶಿಸಲು ತುಂಬ ಹೆದರಿಕೊಳ್ಳುತ್ತಾರೆ. ಹೀಗಾಗಿ ದೇವಸ್ಥಾನದ ಹೊರಗೇ ನಿಂತುಕೊಂಡು ಪ್ರಾರ್ಥನೆಗಳನ್ನು ಸಲ್ಲಿಸಿ ತೆರಳುತ್ತಾರೆ.

ಯಮರಾಜನ ಸಹಾಯಕ ಚಿತ್ರಗುಪ್ತ ಈ ದೇವಸ್ಥಾನದಲ್ಲಿ ವಾಸವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದಲ್ಲಿಯ ಒಂದು ಕೋಣೆ ಚಿತ್ರಗುಪ್ತನಿಗಾಗಿಯೇ ಮೀಸಲಾ ಗಿದ್ದು, ಆತ ಇಲ್ಲಿ ಕುಳಿತುಕೊಂಡು ಜನರ ಪುಣ್ಯ ಮತ್ತು ಪಾಪ ಕಾರ್ಯಗಳ ಲೆಕ್ಕವನ್ನಿ ಡುತ್ತಾನೆ ಎನ್ನಲಾಗಿದೆ.

 ಬಂಗಾರ, ಬೆಳ್ಳಿ, ಕಂಚು ಮತ್ತು ಕಬ್ಬಿಣದಿಂದ ನಿರ್ಮಾಣಗೊಂಡಿರುವ ನಾಲ್ಕು ಅದೃಶ್ಯ ದ್ವಾರಗಳು ಈ ದೇವಸ್ಥಾನದಲ್ಲಿವೆ ಎಂದು ನಂಬಲಾಗಿದೆ. ಹಿಂದು ಪುರಾಣಗಳಲ್ಲಿ ಉಲ್ಲೇಖಿ ಸಿರುವಂತೆ ಯಾವ ಆತ್ಮ ಯಾವ ದ್ವಾರದಿಂದ ಒಳಪ್ರವೇಶಿಸಬೇಕು ಎನ್ನುವುದನ್ನು ಖುದ್ದು ಯಮರಾಜನೇ ನಿರ್ಧರಿಸುತ್ತಾನೆ ಎನ್ನಲಾಗಿದೆ.

ಪುರಾಣಗಳಲ್ಲಿ ಹೇಳಿರುವಂತೆ ವ್ಯಕ್ತಿಯೋರ್ವ ಮೃತಪಟ್ಟಾಗ ಆತನ ಆತ್ಮವನ್ನು ಮೊದಲು ಚಿತ್ರಗುಪ್ತನ ಎದುರು ಹಾಜರು ಪಡಿಸಲಾಗುತ್ತದೆ. ಆತ ಆ ವ್ಯಕ್ತಿಯು ಜೀವಂತವಾಗಿದ್ದಾಗ ಮಾಡಿದ್ದ ಪುಣ್ಯದ ಮತ್ತು ಪಾಪದ ಕಾರ್ಯಗಳನ್ನು ಓದಿ ಹೇಳಿದ ಬಳಿಕ ಆ ಆತ್ಮವು ಯಾವ ದ್ವಾರದಿಂದ ಒಳಪ್ರವೇಶಿಸಬೇಕು ಎನ್ನುವುದನ್ನು ಯಮರಾಜನು ನಿರ್ಧರಿಸುತ್ತಾನೆ.

ಈಗ ಹೇಳಿ...ನಿಮಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವ ಧೈರ್ಯವಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News