×
Ad

ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ರಮಝಾನ್ ಪ್ರಯುಕ್ತ ರೆಡಿಮೇಡ್ ಉಡುಪುಗಳ ಮಾರಾಟ

Update: 2017-06-24 14:12 IST

ಮಂಗಳೂರು, ಜೂ.17: ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ಬ್ರಾಂಡೆಡ್ ಆ್ಯಂಡ್ ಎಕ್ಸ್‌ಪೋರ್ಟ್ ಸರ್‌ಪ್ಲಸ್ ಸಂಸ್ಥೆಯು ರೆಡಿಮೇಡ್ ಉಡುಪುಗಳ ಬೃಹತ್ ಸ್ಟಾಕ್ ಕ್ಲಿಯರೆನ್ಸ್ ಮಾರಾಟವನ್ನು ಜೂ.3ರಿಂದ ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಪ್ರಸಕ್ತ ವಿತ್ತೀಯ ವರ್ಷದ ಹೊಸ ಒಂದು ಲಕ್ಷಕ್ಕೂ ಮಿಗಿಲಾದ 100% ಒರಿಜಿನಲ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಸ್ಟಾಕ್‌ನ್ನು ಜಿಎಸ್‌ಟಿ ತೆರಿಗೆ ಜಾರಿಗೊಳ್ಳುವ ಮುನ್ನ ಅತ್ಯಂತ ಕಡಿಮೆ ದರದಲ್ಲಿ ರಿಟೇಲ್ ಗ್ರಾಹಕರಿಗೆ ನೀಡಲು ಉದ್ದೇಶಿಸಿರುವರು.

ಈ ಬೃಹತ್ ಸ್ಟಾಕ್ ಕ್ಲಿಯರೆನ್ಸ್ ಮಾರಾಟ ಮೇಳದಲ್ಲಿ ಪುರುಷರ ಬ್ರಾಂಡೆಡ್ ಜೀನ್ಸ್, ಸೆಂಚುರಿ ಕಾಟನ್‌ಜೀನ್ಸ್, ಸೆಂಚುರಿ ಫಾರ್ಮಲ್ ಪ್ಯಾಂಟ್, ಬ್ರಾಂಡೆಡ್ ಶರ್ಟ್ಸ್, ಕ್ಯಾಸುವಲ್ ಶರ್ಟ್ಸ್, ಆಫೀಸ್‌ವೇರ್ ಶರ್ಟ್ಸ್, ಕಾಟನ್ ಟೀ-ಶರ್ಟ್ಸ್, ಫ್ಯಾನ್ಸಿ ಟೀ ಶರ್ಟ್ಸ್, ಸೆಂಚುರಿ ಕಾಟನ್ ಮಿಲ್ ಶರ್ಟ್ಸ್ ಸಂಗ್ರಹವಿದೆ. ಅದಲ್ಲದೇ ಮಹಿಳೆಯರ ಸಿದ್ಧ ಉಡುಪುಗಳಾದ ಜೈಪುರಿ ಕಾಟನ್ ಕುರ್ತೀಸ್, ಬ್ರಾಂಡೆಡ್ ಕಾಪ್ರಿ 3/4th ಬ್ರಾಂಡೆಡ್ ಲೆಗಿನ್ಸ್ ಮತ್ತು ಪಲಾಜೊ ಹಾಗೂ ಚಿಕ್ಕಮಕ್ಕಳ ಬ್ರಾಂಡೆಡ್ ಕಿಡ್ಸ್ ಕಾಟನ್ ಶರ್ಟ್ಸ್, ಬ್ರಾಂಡೆಡ್ ಜೀನ್ಸ್, ಬ್ರಾಂಡೆಡ್ ಟೀ-ಶರ್ಟ್ಸ್ ಸಂಗ್ರಹವಿರುತ್ತದೆ.

 ಈ ಮಾರಾಟ ಕೇಂದ್ರದಲ್ಲಿ ಸ್ಪೆಷಲ್ ಕೌಂಟರ್‌ನ್ನು ಪ್ರತ್ಯೇಕವಾಗಿ ಆರಂಭಿಸಲಾಗಿದ್ದು ಅದರಲ್ಲಿ ಹೈ-ಪೈ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್, ಕಾಟನ್ ಶರ್ಟ್ಸ್ ಹಾಗೂ ಕ್ಯಾಶುವಲ್ ಶರ್ಟ್‌ಗಳಿವೆ. ಗ್ರಾಹಕರಿಗಾಗಿ ವಿನೂತನ ಕೊಡುಗೆಯನ್ನು ನೀಡಲಾಗುತ್ತಿದ್ದು 4 ಶರ್ಟ್ಸ್ ಅಥವಾ 3 ಪ್ಯಾಂಟ್ಸ್ ಖರೀದಿಗೆ ಕೇವಲ ರೂ. 999 ನಿಗದಿಪಡಿಸಲಾಗಿದೆ. ಈ ಕೌಂಟರ್‌ನ ವಿಶೇಷತೆಯೆಂದರೆ ಇಲ್ಲಿ 28ರಿಂದ 46ರವರೆಗಿನ ಗಾತ್ರದ ಪ್ಯಾಂಟ್ ಹಾಗೂ 36ರಿಂದ 46ರವರೆಗಿನ ಗಾತ್ರದ ಶರ್ಟ್‌ಗಳು ದೊರೆಯುತ್ತವೆ.

ಇಲ್ಲಿ ಪ್ರದರ್ಶಿಸಲಾಗುವ ಬಟ್ಟೆಬರೆಗಳು ಬ್ರಾಂಡೆಡ್ ಉತ್ಪನ್ನಗಳಾಗಿದ್ದು ಮಿಕಾಡೊ, ವಿಲ್ಸ್, ಬ್ಲೂಬರ್ಡ್, ವ್ಯಾಂಗ್ಲರ್, ಬುಲ್‌ಮ್ಯಾನ್, ಕಿಂಗ್ ಆ್ಯಂಡ್ ಕ್ರಾಸ್, ಯುನಿಕ್‌ಮ್ಯಾನ್, ರೆಡ್‌ಬುಲ್, ಲೀ ಕಾರ್ಲೊ, ಲೀ, ಎಫ್‌ಲ್ಯಾಬ್, ಗಿಸ್ಟರ್, ಅರಿಜೋನಾ, ಈಗಲ್ ಸ್ಟಾಫರ್ಡ್, ಜಾನ್ ಪ್ಲೇಯರ್ಸ್‌, ಅಡ್ವೆಂಚರ್ ಇತ್ಯಾದಿ ಬ್ರಾಂಡ್‌ಗಳ ರೆಡಿಮೇಡ್ ಗಾರ್ಮೆಂಟ್ಸ್ ಮಾರಾಟ ಮಾಡಲಾಗುತ್ತಿದೆಯೆಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News