ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಈದ್ ಕಿಟ್ ವಿತರಣೆ
ಉಳ್ಳಾಲ, ಜೂ.24: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಧಾರ್ಮಿಕ, ಸಾಂಘಿಕ ಹಾಗು ಸಾಮುದಾಯಿಕ ಕಾರ್ಯಕ್ರಮಗಳು ನಡೆದು ಬರುತ್ತಿರುವುದಲ್ಲದೆ, ಬಡ ನಿರ್ಗತಿಕರ ಅನಾಥರ ಹಾಗು ವಿಧವೆಯರ ಕಣ್ಣೀರ ಒರೆಸುವ ಸಾಂತ್ವನ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಇದರ ಒಂದು ಭಾಗವಾಗಿ ಉಳ್ಳಾಲ ಮತ್ತು ಸುತ್ತಮುತ್ತಲಿನ 50 ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಗುತ್ತಿದೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ತಿಳಿಸಿದರು.
ಅವರು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿನಲ್ಲಿ ನಡೆದ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿ ತೌಸೀಫ್ ಸಅದಿ ಹರೇಕಳ ಮಾತನಾಡಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಕಾರ್ಯ ವೈಖರಿಯು ತುಂಬಾ ಉತ್ತಮವಾಗಿದ್ದು, ರಾಜ್ಯದಲ್ಲೇ ಮಾದರೀ ಸೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ಹಾಗು ಮುಖ್ಯ ಅತಿಥಿಯಾಗಿ ಆಗಮಿಸಿದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಲಾ ಮೂರು ಕಿಟ್ ಗಳಂತೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಹನ್ನೊಂದು ಶಾಖೆಗಳ ಬಡ ಕುಟುಂಬಗಳಿಗೆ ವಿತರಿಸಿದ 33 ಕಿಟ್ ಗಳು ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ 17 ಕುಟುಂಬಗಳಿಗೆ ವಿತರಿಸಿದ ಕಿಟ್ಟು ಗಳು ಸಹಿತ 50 ಈದ್ ಕಿಟ್ಟು ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಇಹ್ಸಾನ್ ಸಹಾಯ ಫಂಡ್ ಇದರ ಪೋಸ್ಟರನ್ನು ಪ್ರದರ್ಶಿಸಲಾಯಿತು. ಹಾಗು ಪ್ರತೀ ಶಾಖೆಯಿಂದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ರಾಜ್ಯ ನಿಧಿಗೆ ಹಸ್ತಾಂತರಿಸಲಾಗುವ ಫಂಡನ್ನು ಸೆಕ್ಟರ್ ಉಸ್ತುವಾರಿಯಾದ ತೌಸೀಫ್ ಸಅದಿ ಹರೇಕಳರ ಮೂಲಕ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಆಝಾದ್ ನಗರ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಳ್ಳಾಲ ಇವರ ನೇತ್ರತ್ವದಲ್ಲಿ ಸ್ವಲವಾತ್ ಇಜ್ತಿಮಾ, ದ್ಸಿಕ್ರ್ ಮಜ್ಲಿಸ್ ನಡೆಯಿತು.
ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿ ಮಾತನಾಡಿ ಉಳ್ಳಾಲ ಮತ್ತು ಆಸುಪಾಸಿನ ಅರ್ಹ ಬಡ ಕುಟುಂಬಗಳಿಗೆ ಮಾಸಿಕ ಅಕ್ಕಿ ವಿತರಣೆ, ರಂಝಾನ್ ಕಿಟ್ ವಿತರಣೆ, ಮದುವೆಗೆ ಸಹಾಯ ಮುಂತಾದ ಸಾಂತ್ವನ ಕಾರ್ಯಕ್ರಮಗಳನ್ನು ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಅಧೀನದ ಸಾಂತ್ವನ ವಿಭಾಗ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಸಾಂತ್ವನ ವಿಭಾಗದ ಕೋಶಾಧಿಕಾರಿ ತ್ವಾಹಿರ್ ಹಾಜಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಹಮೀದ್ ತಲಪಾಡಿ, ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್, ಸಿರಾಜ್ ಉಸ್ತಾದ್ ಚಾಲಿಯಂ, ಹಾಫಿಝ್ ಉವೈಸ್ ಕೋಟೆಪುರ, ಸಾದಾತ್ ಫಂಡ್ ಅಸೋಸಿಯೇಷನ್ ಕನ್ವೀನರ್ ಸಯ್ಯಿದ್ ಜವಾದ್ ತಂಗಳ್, ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಜತೆ ಕಾರ್ಯದರ್ಶಿಗಳಾದ ಹಂಝ ಸುಂದರಿಭಾಗ್ ಮತ್ತು ಇಕ್ಬಾಲ್ ಒಂಭತ್ತುಕೆರೆ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾದರ್, ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ, ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್, ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷ ಅಬ್ದುಲ್ಲತೀಫ್, ಶರೀಫ್ ಅಕ್ಕರೆಕೆರೆ, ಕಬೀರ್, ಹನೀಫ್ ಖಿಲ್ರಿಯ, ಇಮ್ರಾನ್ ಕೋಟೆಪುರ ಹಾಗು ಶಫೀಖ್ ಮೇಲಂಗಡಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು.