×
Ad

ಅಶ್ರಫ್ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ಮನವಿ

Update: 2017-06-24 18:14 IST

ಮಂಗಳೂರು, ಜೂ.24: ಬೆಂಜನಪದವಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಕಲಾಯಿಯ ಮುಹಮ್ಮದ್ ಅಶ್ರಫ್‌ರ ಮನೆಗೆ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಯೋಗ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಿತು.

ಬಳಿಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯನ್ನು ಬಂಟ್ವಾಳದ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗವು ಅಶ್ರಫ್‌ನ ಕುಟುಂಬಕ್ಕೆ ಮುಖ್ಯಮಂತ್ರಿಯ ನಿಧಿಯಿಂದ ಪರಿಹಾರ ನೀಡಲು ಮನವಿ ಸಲ್ಲಿಸಿತು. ಅಲ್ಲದೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು, ಕಲ್ಲಡ್ಕ ಗಲಭೆಯನ್ನು ನಿಯಂತ್ರಿಸಲು ವಿಫಲರಾದ ಪೊಲೀಸ್ ಅಧಿಕಾರಿಗಳ ಸಹಿತ ಸಿಬ್ಬಂದಿ ವರ್ಗದ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿತು. ಈ ಮನವಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್‌ಗೂ ಸಲ್ಲಿಸಿತು.

ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಹಮೀದ್ ಕುದ್ರೋಳಿ, ಮುಸ್ತಫಾ ಸಿ.ಎಂ., ಮುಹಮ್ಮದ್ ಹನೀಫ್ ಯು., ಅಶ್ರಫ್ ಕಿನಾರ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಅಬ್ದುಲ್ ಜಲೀಲ್ ಯಾನೆ ಅದ್ದು ಕೃಷ್ಣಾಪುರ, ಸುಹೈಲ್ ಕಂದಕ್, ನೌಶಾದ್ ಬಂದರ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News