ಮುಂಡ್ರುಪ್ಪಾಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ
ಬೆಳ್ತಂಗಡಿ, ಜೂ. 24: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರು ಆರೋಗ್ಯವಂತರಾಗಿ ಬೆಳೆಯುವಂತೆ ನೋಡಿಕೊಳ್ಳಬೇಕಾಗಿದೆ, ಇದಕ್ಕಾಗಿ ಸರಕಾರ ಅಂಗನವಾಡಿ ಮಕ್ಕಳಿಗೆ ಉತ್ತಮ ಆಹಾರ ಪೂರೈಕೆ ಮಾಡುತ್ತಿದೆ ಎಂದು ಶಾಸಕ ಕೆ ವಸಂತ ಬಂಗೇರ ಹೇಳಿದರು.
ಅವರು ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಮುಂದಾಗಬೇಕು ಆಗ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತು ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತು ಸದಸ್ಯರುಗಳಾದ ಟಿ.ವಿ ದೇವಸ್ಯ, ಪ್ರಭಾಕರ ಡಿ, ರೀನಾ, ಪ್ರೇಮಾ, ಲಕ್ಷ್ಮೀ ಭಟ್, ಹೊನ್ನಮ್ಮ, ಗ್ರಾ. ಪಂ ಅಭಿವೃದ್ದಿ ಅಧಿಕಾರಿ ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ವಿಧ್ಯಾ ಸ್ವಾಗತಿಸಿ ವಂದಿಸಿದರು.