×
Ad

ಉಜಿರೆಯಲ್ಲಿ ಅಪರಿಚಿತರ ಮೃತದೇಹ ಪತ್ತೆ

Update: 2017-06-24 19:15 IST

ಬೆಳ್ತಂಗಡಿ, ಜೂ. 24: ಉಜಿರೆ ಜನಾರ್ದನ ಸ್ವಾಮಿ ದೇವಳದ ರಸ್ತೆಯ ಬದಿಯಲ್ಲಿ ಸುಮಾರು 60-65 ವರ್ಷ ಪ್ರಾಯದ ಗಂಡಸಿನ ಅಪರಿಚಿತ ಶವ ಶನಿವಾರ ಪತ್ತೆಯಾಗಿದೆ. ಅದೇ ರೀತಿ ಜೂ.20 ರಂದು ಉಜಿರೆ ಕಾಲೇಜು ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಸುದಾರರು ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News