×
Ad

ಆರ್ಟಿಸ್ಟ್ ಫೋರಂನ ಅಧ್ಯಕ್ಷರಾಗಿ ರಮೇಶ್ ರಾವ್

Update: 2017-06-24 20:49 IST

ಉಡುಪಿ, ಜೂ.24: ರಜತ ಮಹೋತ್ಸವದ ಸಂಭ್ರಮದಲ್ಲಿ ಉಡುಪಿಯ ಚಿತ್ರಕಲಾವಿದರ ಸಂಘಟನೆ ‘ಆರ್ಟಿಸ್ಟ್ ಫೋರಂ’ನ 25ನೇ ವರ್ಷದ ಅಧ್ಯಕ್ಷರಾಗಿ ಖ್ಯಾತ ಚಿತ್ರ ಕಲಾವಿದ ರಮೇಶ್ ರಾವ್ ಆಯ್ಕೆಯಾಗಿದ್ದಾರೆ.ಇಲ್ಲಿ ನಡೆದ ಆರ್ಟಿಸ್ಟ್ ಫೋರಂನ ವಾರ್ಷಿ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಪೋರಂನ ಕಾರ್ಯದರ್ಶಿಯಾಗಿ ಸಕು ಪಾಂಗಾಳ ಪುನರಾಯ್ಕೆ ಯಾಗಿದ್ದಾರೆ.

ಬೆಂಗಳೂರಿನ ಭಾಸ್ಕರ್ ರಾವ್ ಸಂಘಟನೆಯ ಗೌರವಾಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಪುರುಷೋತ್ತಮ ಅಡ್ವೆ, ಮಂಗಳೂರಿನ ಮೋಹನ್‌ಕುಮಾರ್, ಜತೆ ಕಾರ್ಯದರ್ಶಿಯಾಗಿ ಮಂಗಳೂರಿನ ರಾಜೇಂದ್ರ ಕೇದಿಗೆ, ಖಜಾಂಚಿ ಯಾಗಿ ಎಚ್.ಕೆ.ರಾಮಚಂದ್ರ, ಸಂಘಟನಾ ಕಾರ್ಯದರ್ಶಿ ಸಿಂಧು ಕಾಮತ್‌ರನ್ನು ಆಯ್ಕೆ ಮಾಡಲಾಗಿದೆ.

ಸಂಘಟನೆಯ ಕಾರ್ಯಕಾರಿ ಮಂಡಳಿಗೆ ಹರಿಪ್ರಸಾದ್, ಕುಂದನ್ ಮಂಗಳೂರು, ಪ್ರಕಾಶ್, ಜಯವಂತ್ ಮಣಿಪಾಲ, ಶ್ರೀನಾಥ್ ಮಣಿಪಾಲ, ಶಿವಹಾದಿಮನಿ ರಾಣಿಬೆನ್ನೂರು ಹಾಗೂ ನಾಗರಾಜ ಹನೆಹಳ್ಳಿ ನೇಮಕಗೊಂಡಿದ್ದಾರೆ ಎಂದು ಆರ್ಟಿಸ್ಟ್ ಫೋರಂನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News