×
Ad

" ಕರಾವಳಿಯ ಮುಸ್ಲಿಮ್ ಸಂಘ ಸಂಸ್ಥೆಗಳು ಸೇವಾ ಕಾರ್ಯದ ಸ್ಪರ್ಧೆಯಲ್ಲಿದಾರೆ; ಈ ಸ್ಪರ್ಧೆ ಆರೋಗ್ಯಪೂರ್ಣವಾಗಿರಲಿ "

Update: 2017-06-25 11:05 IST

ಮಂಗಳೂರು, ಜೂ.25: ಭವ್ಯ ಭಾರತಕ್ಕೆ ಬಲಿಷ್ಠ ಬುನಾದಿ ಹಾಕುವಲ್ಲಿ ಮುಸ್ಲಿಮ್ ಸಮುದಾಯ ಮಾಡುತ್ತಿರುವ ಸೇವೆ ಅನನ್ಯವಾದದ್ದು. ಈ ದೇಶದಲ್ಲಿ ಬಡತನ ನಿವಾರಣೆ ಮತ್ತು ಶೈಕ್ಷಣಿಕ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮ್ ಸಮುದಾಯದ ಸೇವಾ ಸಂಸ್ಥೆಗಳು ಮತ್ತು ಯುವ ಸಂಘಟನೆಗಳು ಅವಿರತ ಶ್ರಮಿಸುತ್ತಿರುವುದನ್ನು ಕಾಣುವಾಗ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹಿದಾಯ ಪೌಂಡೇಶನ್ ಇದರ ಅಧ್ಯಕ್ಷರಾದ ಹಾಜೀ ಝಕರಿಯಾ ಜೋಕಟ್ಟೆ ತನ್ನ ಈದ್ ಸಂದೇಶದಲ್ಲಿ ಹೇಳಿದ್ದಾರೆ.

ಸುಂದರ ಮತ್ತು ಸದೃಢ ಭಾರತದ ಕನಸು ನನಸು ಮಾಡುವಲ್ಲಿ ಸರಕಾರಕ್ಕಿಂತಲೂ ಹೆಚ್ಚು ಕಾಳಜಿ ಸಮುದಾಯದ ಜನರಲ್ಲಿ ಕಾಣುವಾಗ ನಾವೆಲ್ಲರೂ ನೀಡುತ್ತಿರುವ ಕೊಡುಗೆಗಳು ನಿರುಪಯುಕ್ತ ಆಗಲಾರದು ಎಂದವರು ಹೇಳಿದರು.

ಸಮುದಾಯದ ಯುವಕರು ಮತ್ತು ಯುವತಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ವ್ಯಯಿಸುತ್ತಿರುವ ಶ್ರಮ ಅಭಿನಂದನಾರ್ಹ ಮತ್ತು ಸಮುದಾಯದ ಭವಿಷ್ಯದ ಚಿತ್ರಣ ಬದಲಾಯಿಸಲು ಇದು ಹೆಚ್ಚು ಮಹತ್ವಪೂರ್ಣ ಈ ನಿಟ್ಟಿನಲ್ಲಿ ಯುವತಲೆಮಾರನ್ನು ಸರಿಯಾದ ಆಯ್ಕೆಗಾಗಿ ಮತ್ತು ದಾರಿಯಲ್ಲಿ ಕೊಂಡು ಹೋಗುವ ಕೆಲಸ ನಾವು ನಿರಂತರ ಮಾಡಬೇಕು ಎಂದು ಅವರು ಹೇಳಿದರು.

ಒಂದು ಕಾಲದಲ್ಲಿ ನಾವು ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮುದಾಯ ಆಗಿದ್ದೇವು.ನಗರದಲ್ಲಿ ಕಾಣುವ ಶ್ರೀಮಂತಿಕೆಯ ರಂಗು ಗ್ರಾಮಾಂತರ ಪ್ರದೇಶಕ್ಕೆ ಸಾಗುವಂತೆ ಕಳೆಗುಂದಿದ್ದವು ಆದರೆ ಈಗ ನಾವು ನಮ್ಮ ಸೇವೆನ್ನು ಸರಿಯಾದ ದಾರಿಯಲ್ಲಿ ಕೊಂಡು ಹೋಗಿ ಪರಿಣಾಮಕಾರಿ ಬದಲಾವಣೆ ತಂದಿದ್ದೇವೆ. ಇಂದು ಗ್ರಾಮ ಪ್ರದೇಶದಲ್ಲಿ ಮುಸ್ಲಿಮರು ತಟ್ಟಿಮನೆಯಲ್ಲಿ ಇರುವುದನ್ನು ತಾವು ಕಾಣಲಾರಿ ಹಾಗೇ ಜಿಲ್ಲೆಯ ವಿಧ್ಯಾರ್ಥಿಗಳು ಶಿಕ್ಷಣ ವಂಚಿತರಾಗುವ ಅಂಕಿ ಅಂಶಗಳು ಗಣನಿಯ ಕಡಿಮೆಯಾಗಿದೆ ಇದಕ್ಕೆ ಕಾರಣ ನಮ್ಮ ಸಮುದಾಯದ ಸಮಾಜಸೇವಾ ಸಂಸ್ಥೆ ಮತ್ತು ಸಮುದಾಯ ಸ್ನೇಹಿಗಳ ಪ್ರಾಮಾಣಿಕ ಶ್ರಮ ಎಂದ ಅವರು, ಈ  ಸಾಲಿನ ಶಿಕ್ಷಣ ಫಲಿತಾಂಶದಲ್ಲಿ ಯುವತಿಯರು ಹೆಚ್ಚು ಬುದ್ದಿವಂತರಾಗಿ ಗುರುತಿಸಿದ್ದಂತೆ ಯುವಕರೂ ಅವರಿಗೆ ಸ್ಪರ್ಧೆ ನೀಡುವ ಮೂಲಕ ತಮ್ಮ ಸಾಧನೆಯನ್ನು ನಿರೂಪಿಸಬೇಕು ಎಂದರು.

ಸಮುದಾಯದಲ್ಲಿ ಬಡತನ ಮತ್ತು ಹಸಿವು ಕಡಿಮೆಯಾಗಿದೆ. ಎಲ್ಲಾ ಸಂಘ ಸಂಸ್ಥೆಗಳು ಕಲ್ಯಾಣ ಕಾರ್ಯದಲ್ಲಿ ಸ್ಪರ್ಧೆಯಲ್ಲಿದೆ. ಈ ಸ್ಪರ್ಧೆ ಆರೋಗ್ಯಪೂರ್ಣವಾಗಲಿ ಎಂದ ಝಕರಿಯಾ ಹಾಜಿ ಭಾರತದ ಭವಿಷ್ಯದ ಮುಂದುವರಿದ ಸಮುದಾಯ ಅದು ಮುಸ್ಲಿಮ್ ಆಗಿರುತ್ತದೆ ಎಂಬ ಅಭಿಮಾನ ಪ್ರಕಟಿಸಿದರು.

ನಾವು ಯುವಕರನ್ನು ಹೆಚ್ಚು ದೇಶದ ಸೇವೆಯಲ್ಲಿ ಮತ್ತು ಮಾನವ ಕಲ್ಯಾಣ ಕಾರ್ಯಾಲ್ಲಿ ತೊಡಗುವಂತೆ ಮಾಡಬೇಕು ಕೇವಲ ಮುಸ್ಲಿಮರು ಮಾತ್ರವೇ ನಮ್ಮ ಕೊಡುಗೆಗಳ ಫಲಾನುಭವಿಗಳಾಗಬಾರದು ಎಲ್ಲಾ ಧರ್ಮೀಯರಿಗೂ ನಮ್ಮ ಸೇವಾ ಕೊಡುಗೆಗಳ ಪ್ರಯೋಜನ ಸಿಗಬೇಕು ಅದಕ್ಕಾಗಿ ಪ್ರತೀ ಸಂಘ ಸಂಸ್ಥೆಗಳು ಒಂದು ಮೀಸಾಲಾತಿ ಅಜೆಂಡಾ ಹೊಂದಿರಬೇಕು ಎಂದವರು ಅಭಿಪ್ರಾಯ ಪಟ್ಟರು.

ಅಲ್ ಮುಝೈನ್ ಸಂಸ್ಥೆಯಲ್ಲಿ ಜಿಲ್ಲೆಯ ನೂರಾರು ಹಿಂದೂ ಹಾಗೂ ಮುಸ್ಲಿಮ್ ಯುವಕರು ದುಡಿಯುತ್ತಿದ್ದಾರೆ ಯಾರೇ ಆಗಲಿ ಪ್ರತಿಭಾನ್ವಿತ ಯುವಕರ ಆಸಕ್ತಿ ಮತ್ತು ಪ್ರತಿಭೆಗೆ ಮಹತ್ವ ಕೊಡಬೇಕು ಹೊರತು ಜಾತಿಗಲ್ಲ ಎಂದ ಝಕರಿಯಾ ಹಾಜಿ, ಸಮುದಾಯದ ಅನಗತ್ಯ ವಿಚಾರ ಮತ್ತು ವಿವಾದಕ್ಕೆ ತಲೆ ಹಾಕಬಾರದು.ನಾವು ಚರ್ಚೆ ಮತ್ತು ತರ್ಕವನ್ನು ಕಡಿಮೆಗೊಳಿಸಿ ಆದಷ್ಟೂ ಹೆಚ್ಚು ಸಮಯ ಸಮುದಾಯ ಮತ್ತು ಸಮಾಜದ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ನಮ್ಮ ಬಗ್ಗೆ ನಮಗೆ ಅಪನಂಭಿಕೆ ಮತ್ತು ಭಯ ಇರಬಾರದು.ಇಚ್ಚಾಶಕ್ತಿಯಿಂದ ನಾವು ಪ್ರಾಮಾಣಿಕವಾಗಿ ಪರಿಶ್ರಮಪಟ್ಟರೆ ನಮ್ಮನ್ನು ನೋಡುವ ಇನ್ನಿತರ ಸಮುದಾಯ ನಮ್ಮನ್ನು ಮಾದರಿಯನ್ನಾಗಿ ಆಯ್ಕೆ ಮಾಡಬೇಕು.ನಾವು ದೇಶದ ಆಸ್ತಿ ಮತ್ತು ಭಾಗವಾಗಿದ್ದೇವೆ.ನಾವು ಮಾನವ ಕಲ್ಯಾಣಕ್ಕೆ ಇರುವ ಸಮುದಾಯ. ನಮಗೆ ಇರುವ ಏಕೈಕ ದಾರಿ ನಾವು ನಮ್ಮನ್ನು ಅತ್ಯುತ್ತಮ ಸಮುದಾಯವಾಗಿ ಗುರಿತಿಸಿಕೊಳ್ಳುವ ಯೋಚನೆ ಮತ್ತು ಯೋಜನೆಗೆ ಸಂಪೂರ್ಣ ಸಹಕಾರ ಮತ್ತು ನೆರವು ನೀಡುವುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News