×
Ad

​ಉಳ್ಳಾಲ: ಪೊಲೀಸ್ ರಕ್ಷಣೆಯಲ್ಲಿ ಈದ್ ನಮಾಝ್

Update: 2017-06-25 11:35 IST

ಮಂಗಳೂರು, ಜೂ. 25: ಉಳ್ಳಾಲ ಹಾಗೂ ಸುತ್ತಮುತ್ತಲಿನ ಕೆಲವೆಡೆ ರವಿವಾರ ‘ಪೆರ್ನಾಳ್’ ಆಚರಣೆಗೆ ಸಂಬಂಧಿಸಿ ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಉಳ್ಳಾಲ ದರ್ಗಾ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನೆರವೇರಿಸಲಾಯಿತು.

ಉಳ್ಳಾಲದ ಅಳೇಕಲ, ಮುಕ್ಕಚ್ಚೇರಿ, ಸುಂದರಿಬಾಗ್, ಮಾರ್ಗತಲೆ, ಕಡಪುರ, ಮಂಚಿಲ, ಮಾಸ್ತಿಕಟ್ಟೆ ಹೊರತುಪಡಿಸಿ ಬಹುತೇಕ ಎಲ್ಲಾ ಮಸೀದಿಗಳಲ್ಲಿ ಪೆರ್ನಾಳ್ ಪ್ರಯುಕ್ತ ಈದ್ ನಮಾಝ್ ನೆರವೇರಿಸಲಾಗಿದ್ದು, ಪೊಲೀಸರು ಭದ್ರತೆಯನ್ನು ಒದಗಿಸಿದ್ದರು.

ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್‌ರವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿದ್ದ ಸಮಾಜ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News