×
Ad

ಬಂಟ್ವಾಳ: ಮಳೆಯ ನಡುವೆಯೂ ಸಂಭ್ರಮದ ಈದುಲ್ ಫಿತ್ರ್ ಆಚರಣೆ

Update: 2017-06-25 12:02 IST

ಬಂಟ್ವಾಳ, ಜೂ. 25: ತಾಲೂಕಿನಾದ್ಯಂತ ರವಿವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು ಈ ನಡುವೆಯೂ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ತಾಲೂಕಿನ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಪ್ರಾಥನೆ ನಡೆಯಿತು. ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ವಿಶೇಷ ಪ್ರಾಥನೆಯನ್ನು ಅಶ್ರಫ್ ಫೈಝಿ ನೆರವೇರಿಸಿದರು. ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಈದ್ ಸಂದೇಶ ನೀಡಿದರು.

ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅಬ್ದುಲ್ ಲತೀಫ್ ಫೈಝಿ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಉಸ್ಮಾನ್ ದಾರಿಮಿ, ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಅಬೂಸಾಲಿ ಫೈಝಿ, ಸಜೀಪನಡು ಕೇಂದ್ರ ಜುಮಾ ಮಸೀದಿಯಲ್ಲಿ ಅಸ್ಫಾಕ್ ಫೈಝಿ, ಮೇಗೀನಪೇಟೆ ವಿಟ್ಲ ಕೇಂದ್ರ ಜುಮಾ ಮಸೀದಿ ಮೂಸಲ್ ಫೈಝಿ, ಮುಹಿಯುದ್ದೀನ್ ಜುಮಾ ಮಸೀದಿ ವಗ್ಗ ಇಬ್ರಾಹೀಂ ಫೈಝಿ, ಗಡಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ ಜಮಾಲುದ್ದೀನ್ ದಾರಿಮಿ, ಏನಾಜೆ ಬುಡೋಳಿ ಮುನೀರುಲ್ ಇಸ್ಲಾಮ್ ಮದರಸ ಮಜೀದ್ ದಾರಿಮಿ, ಬದ್ರಿಯಾ ಜುಮಾ ಮಸೀದಿ ಪುಂಜಾಲಕಟೆ ಅಶ್ರಫ್ ಫೈಝಿ, ಮುಬಾರಕ್ ಜುಮಾ ಮಸೀದಿ ಬಾಂಬಿಲ ಸಿರಾಜುದ್ದೀನ್ ಫೈಝಿ ಈದ್ ನಮಾರ್ಗೆ ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News