×
Ad

ಜಲೀಲ್ ಕರೋಪಾಡಿ ಸಹೋದರ ಅನ್ವರ್ ಕರೋಪಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ

Update: 2017-06-25 13:50 IST

ಬಂಟ್ವಾಳ, ಜೂ. 25: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆಯಿಂದ ತೆರವಾಗಿರುವ ಮಿತ್ತನಡ್ಕ ವಾರ್ಡ್‌ಗೆ ಜುಲೈ 2ರಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಲೀಲ್‌ರವರ ತಮ್ಮ ಎ.ಮುಹಮ್ಮದ್ ಅನ್ವರ್ ಕರೋಪಾಡಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿಘ್ನೇಶ್ವರ್ ಭಟ್ ಮತ್ತು ಹರೀಶ್ ಕೋಡ್ಲ ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ವಿಘ್ನೇಶ್ವರ್ ಭಟ್ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.ಎ.ಮುಹಮ್ಮದ್ ಅನ್ವರ್ ಕರೋಪಾಡಿ ಮತ್ತು ಹರೀಶ್ ಕೋಡ್ಲ ಕಣದಲ್ಲಿದ್ದಾರೆ.

ಜುಲೈ 2ರಂದು ಮಿತ್ತನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 8 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು ಜುಲೈ 3ರಂದು ಮತ ಫಲಿತಾಂಶ ಹೊರಬರಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News