ಏರ್ ಇಂಡಿಯಾ ಖಾಸಗೀಕರಣಕ್ಕೆ ಮುನ್ನ 27,000 ಸಿಬ್ಬಂದಿಗಳ 1,200 ಕೋ.ರೂ.ವೇತನ ಬಾಕಿ ಪಾವತಿಸಲು ಪೈಲಟ್‌ಗಳ ಆಗ್ರಹ

Update: 2017-06-25 09:53 GMT

ಹೊಸದಿಲ್ಲಿ,ಜೂ.25: ಏರ್ ಇಂಡಿಯಾದ ಖಾಸಗೀಕರಣ ಪ್ರಸ್ತಾವವು ಸ್ವಾಗತಾರ್ಹ ನಡೆಯಾಗಿದೆ, ಆದರೆ ಅದಕ್ಕೂ ಮುನ್ನ ಈ ಹಿಂದೆ ಭರವಸೆ ನೀಡಿದ್ದಂತೆ ಸಿಬ್ಬಂದಿಗಳ ವೇತನ ಬಾಕಿಯನ್ನು ಪಾವತಿಸಬೇಕು ಎಂದು ಭಾರತೀಯ ಪೈಲಟ್‌ಗಳ ಸಂಘ(ಐಪಿಜಿ) ವು ಆಗ್ರಹಿಸಿದೆ.

ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರ್ ಇಂಡಿಯಾ 2012ರಲ್ಲಿ ಸಿಬ್ಬಂದಿ ಗಳ ವೇತನ ಕಡಿತ ಕ್ರಮವನ್ನು ಕೈಗೊಂಡಿತ್ತು. ಆಗಿನಿಂದ ವೇತನ ಬಾಕಿ ಹೆಚ್ಚುತ್ತಲೇ ಇದೆ. ಕೆಲವೇ ವಿಭಾಗಗಳ ಸಿಬ್ಬಂದಿಗಳು ಪರಿಷ್ಕೃತ ವೇತನ ಶ್ರೇಣಿಯನ್ನು ಒಪ್ಪಿಕೊಂಡಿದ್ದಾರೆ.

ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು ಸೇರಿದಂತೆ 27,000ಕ್ಕೂ ಅಧಿಕ ಏರ್ ಇಂಡಿಯಾ ಸಿಬ್ಬಂದಿಗಳಿಗೆ ಪಾವತಿಸಬೇಕಾಗಿರುವ ವೇತನ ಬಾಕಿಯ ಮೊತ್ತ ಸುಮಾರು 1,200 ಕೋ.ರೂ.ಗಳಷ್ಟಿದೆ. ಈ ಪೈಕಿ ಸುಮಾರು 400 ಕೋ.ರೂ. ಪೈಲಟ್ ಗಳಿಗೆ ಬರಬೇಕಿದೆ ಎಂದು ಹಿರಿಯ ಪೈಲಟ್ ಓರ್ವರು ತಿಳಿಸಿದರು.
ಎರಡು ವರ್ಷಗಳ ಹಿಂದೆ ಅಶ್ವನಿ ಲೋಹಾನಿ ಅವರು ಏರ್ ಇಂಡಿಯಾದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ ಎಲ್ಲ ವೇತನ ಬಾಕಿಯನ್ನು ಹಂತಹಂತವಾಗಿ ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News